ವಾಷಿಂಗ್ಟನ್: ಸರಕು ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದಿದೆ ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ಮಂಗಳವಾರ ತಿಳಿಸಿದೆ.
ಘಟನೆಯಿಂದ ಸೇತುವೆ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ನೀರಿಗೆ ಬಿದ್ದಿರುವುದಾಗಿ ವರದಿ ತಿಳಿಸಿದ್ದು, ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೇತುವೆ ಕುಸಿದು ಬೀಳುವ ದೃಶ್ಯ ವೈರಲ್ ಆಗುತ್ತಿದೆ. ಸರಕು ತುಂಬಿದ ಹಡಗು ಸಾಗುತ್ತಿದ್ದ ವೇಳೆ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಕುಸಿದು ಬಿದ್ದಿದೆ ಈ ವೇಳೆ ಸೇತುವೆ ಮೇಲೆ ಹಲವು ವಾಹನಗಳು ಇದ್ದವು ಎಂದು ಹೇಳಲಾಗಿದ್ದು ಅವೆಲ್ಲವೂ ನದಿಗೆ ಬಿದ್ದಿರುವುದಾಗಿ ಹೇಳಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ, ಜೊತೆಗೆ ಸೇತುವೆ ಕುಸಿತದಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.