ಮುಂಬಯಿ: ದೇಶದೆಲ್ಲೆಡೆ ಚೌತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಆಯಾಯ ಪ್ರದೇಶದಲ್ಲಿ ಅವರ ಶಕ್ತಿ ಸಾಮರ್ಥ್ಯಕ್ಕೆ ಸರಿಯಾಗಿ ವಿಭಿನ್ನ ರೀತಿಯಲ್ಲಿ ಚೌತಿ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಮುಂಬೈನ ಲಾಲ್ಬಾಗ್ಚಾ ದಲ್ಲಿರುವ ಗಣೇಶನ ಮೂರ್ತಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಇದಕ್ಕೆ ಕಾರಣವೂ ಇದೆ.
ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಮುಂಬೈನಲ್ಲಿರುವ ಪ್ರಸಿದ್ಧ ಲಾಲ್ಬಾಗ್ಚಾ ರಾಜ ವಿನಾಯಕನಿಗೆ 15 ಕೋಟಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಹತ್ತು ದಿನಗಳ ಕಾಲ ಇಲ್ಲಿ ಗಣೇಶನ ವಿಗ್ರಹವನ್ನು ಪೂಜಿಸಲಾಗುತ್ತದೆ ಈ ವೇಳೆ ಮುಂಬೈನ ದೊಡ್ಡ ದೊಡ್ಡ ಉದ್ಯಮಿಗಳು, ಚಲನ ಚಿತ್ರ ನಟ, ನಟಿಯರು, ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯುತ್ತಾರೆ. ಹಾಗಾಗಿ ಇಲ್ಲಿ ಚೌತಿಯನ್ನು ಬಹಳ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.
ಮದುವೆಯಾದ ಬಳಿಕ ಅನಂತ್ ಅಂಬಾನಿ ದಂಪತಿಯ ಮೊದಲ ಚೌತಿ ಹಬ್ಬವಾಗಿದ್ದು ಈ ಹಿನ್ನೆಲೆಯಲ್ಲಿ ಗಣೇಶನಿಗೆ ೨೦ ಕೆಜಿ ಚಿನ್ನದ ಕಿರೀಟವನ್ನು ದಂಪತಿಗಳು ಕಾಣಿಕೆಯಾಗಿ ನೀಡಿದ್ದಾರೆ.
ಪ್ರತಿವರ್ಷ ಲಾಲ್ಬಾಗ್ಚಾ ದಲ್ಲಿ ನಡೆಯುವ ಚೌತಿ ಹಬ್ಬದಲ್ಲಿ ಅಂಬಾನಿ ಕುಟುಂಬ ಭಾಗಿಯಾಗುತ್ತಿದ್ದಾರೆ.