ಶಿವಮೊಗ್ಗ : ಪತಿ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಳಿಕ ಹೆದರಿ ಶರಾವತಿ ನದಿ ಸೇತುವೆ ಮೇಲಿಂದ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುರುಳಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹೌದು ಪತಿಯ ಹಲ್ಲೆಯಿಂದ ಗಾಯಗೊಂಡ ಪತ್ನಿ ಸಬೀತಾ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂದ ವ್ಯಕ್ತಿಯನ್ನು ಸದಾನಂದ ಭಟ್, ಎಂದು ತಿಳಿದುಬಂದಿದೆ.ಕಳೆದ 12 ವರ್ಷಗಳಿಂದ ಪ್ರತಿನಿತ್ಯ ಜಗಳ ಮಾಡಿಕೊಂಡಿದ್ದ ದಂಪತಿ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಮನೆಯಲ್ಲಿದ್ದರೂ ಇಬ್ಬರು ಬೇರೆ ಬೇರೆ ಅಡುಗೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪತಿಗೆ ಅನೈತಿಕ ಸಂಬಂಧ ಇರುವುದು ಪತ್ನಿಯ ಗಮನಕ್ಕೆ ಬಂದಿದೆ.
ಈ ವಿಚಾರವಾಗಿ ಗಂಡನೊಂದಿಗೆ ಜಗಳಕ್ಕೆ ಬಿದ್ದಿದ್ದ ಪತ್ನಿ. ದಿನನಿತ್ಯ ಇದೇ ವಿಚಾರವಾಗಿ ಜಗಳವಾಡುತ್ತಿದ್ದ ಪತ್ನಿ. ಇದರಿಂದ ಬೇಸತ್ತು. ಪತ್ನಿ ಸಬಿತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಸದಾನಂದ ಭಟ್. ಪತಿಯ ಹಲ್ಲೆಯಿಂದ ತೀವ್ರ ಪೆಟ್ಟಾಗಿ ಮೂರ್ಚೆ ಹೋದ ಪತ್ನಿ. ಸ್ವಲ್ಪ ಹೊತ್ತಿನ ನಂತರ ಸಬೀತಾ ಚಿಕ್ಕಪ್ಪನ ಮಗ ಬಂದು ಸಬೀತಾರನ್ನ ರಿಪ್ಪನ್ ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಶಿವಮೊಗ್ಗದ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದಾರೆ.