ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿದೆ. ದೇಶದೆಲ್ಲೆಡೆ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಕೂರಿಸಿ ಬಹಳ ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೂ ಸಾವರ್ಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಚಂದಾ ವಸೂಲಿ ಮಾಡುವುದು ಸಾಮಾನ್ಯ. ಅದರಲ್ಲೂ ಮಕ್ಕಳಂತೂ ಬಹಳ ಉತ್ಸಾಹದಿಂದ ಮನೆ ಮನೆಗಳಿಗೆ, ಹೋಗಿ ಗಲ್ಲಿ ಗಲ್ಲಿಗಳಲ್ಲೂ ತಿರುಗಾಡುತ್ತಾ ಗಣೇಶ ಕಲೆಕ್ಷನ್ ಮಾಡುತ್ತಿರುತ್ತಾರೆ.
ಅದೇ ರೀತಿ ಇಲ್ಲೊಂದು ಮಕ್ಕಳ ಸೈನ್ಯ ಈ ಬಾರಿ ಗಣೇಶ ಕೂರಿಸಲು ಸಂಸದ ಡಾ. ಮಂಜುನಾಥ್ ಅವರ ಬಳಿಯೇ ಹಣ ಕೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಹೇಮಂತ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಮಕ್ಕಳ ಸೈನ್ಯ ಗಣೇಶ ಕೂರಿಸಲು ಸಂಸದ ಡಾ. ಮಂಜುನಾಥ್ ಅವರ ಬಳಿ ಹಣ ಕೇಳುತ್ತಿರುವ ದೃಶ್ಯವನ್ನು ಕಾಣಬಹುದು. ಗಣೇಶ ಕಲೆಕ್ಷನ್‌ಗೆ ಬಂದ ಮಕ್ಕಳಿಗೆ 500 ರೂ. ಕೊಟ್ಟು ಚೆನ್ನಾಗಿ ಓದ್ಬೇಕು ಕಣ್ರೋ ಅಂತ ಹೇಳಿ ಕಳುಹಿಸಿದ್ದಾರೆ.
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸೂಪರ್ ಡಾಕ್ಟ್ರೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಕೆಲಸʼ ಎಂದು ಹೇಳಿದ್ದಾರೆ.