Breaking
Sun. Sep 8th, 2024

ಆಷ್ಟೊಂದು ಹೀನಾಯವಾಗಿ ನನ್ನ ಅಳಿಯನನ್ನು ಕೊಲೆ ಮಾಡಬಾರದಿತ್ತು : ರೇಣುಕಾಸ್ವಾಮಿ ಮಾವ

By Mooka Nayaka News Sep 5, 2024
Spread the love

ದಾವಣಗೆರೆ: ನನ್ನ ಹೆಂಡತಿ ಗರ್ಭಿಣಿ, ಬಿಟ್ಟು ಬಿಡಿ ಎಂದು ನನ್ನ ಅಳಿಯ ಕೈ ಮುಗಿದು ಕೇಳಿಕೊಂಡಾಗ ದರ್ಶನ್ ಇತರರು ಬಿಟ್ಟು ಬಿಟ್ಟಿದ್ದರೆ ಒಳ್ಳೆಯದಾಗುತ್ತಿತ್ತು… ಹೀಗೆಂದು ಹೇಳಿದವರು ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ಮಾವ (ಪತ್ನಿ ತಂದೆ) ಸೋಮಣ್ಣ.

ಗುರುವಾರ ಹರಿಹರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಅಳಿಯ ಏನಾದರೂ ತಪ್ಪು ಮಾಡಿದ್ದರೆ ಕಾನೂನಿದೆ. ಅದರ ಪ್ರಕಾರ ಶಿಕ್ಷೆ ಆಗುತ್ತಿತ್ತು. ಆದರೆ, ಆಷ್ಟೊಂದು ಹೀನಾಯವಾಗಿ ನನ್ನ ಅಳಿಯನನ್ನು ಕೊಲೆ ಮಾಡಬಾರದಿತ್ತು” ಎಂದು ಕಣ್ಣೀರು ಹಾಕಿದರು.

ನನ್ನ ಅಳಿಯ ಹೆಂಡತಿ ಗರ್ಭಿಣಿ. ನನ್ನನ್ನು ಬಿಟ್ಟುಬಿಡಿ ಎಂದು ಕೈ ಮುಗಿದು ಕೇಳಿಕೊಂಡಾಗ ಮಾನವೀಯತೆಯಿಂದ ಬಿಟ್ಟಿದ್ದರೆ ಸಾಕಾಗಿತ್ತು. ಆದರೆ, ಯಾವುದೇ ಕನಿಕರ ಇಲ್ಲದೆ ಹೊಡೆದಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ನನ್ನ ಮಗಳು (ರೇಣುಕಾಸ್ವಾಮಿ ಪತ್ನಿ ಸಹನಾ) ಏಳು ತಿಂಗಳ ಗರ್ಭಿಣಿ. ನಮ್ಮ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಹೊಡೆಯುವಾಗ ಅವರು ನನ್ನ ಮಗಳು, ಆಕೆ ಗರ್ಭಿಣಿ ಎಂಬುದರ ಬಗ್ಗೆಯಾದರೂ ಯೋಚನೆ ಮಾಡಬೇಕಿತ್ತು ಎಂದರು.

ರೇಣುಕಾಸ್ವಾಮಿಗೂ ಹೆಂಡತಿ ಇದ್ದಾಳೆ. ಏನಾದರೂ ಆದರೆ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಿದ್ದರೆ ಅವರಿಗೆ ಮತ್ತು ನಮಗೂ ಎಲ್ಲರಿಗೂ ಒಳ್ಳೆಯದಾಗುತ್ತಿತ್ತು. ಕೈ ಮುಗಿದು ಕೇಳಿಕೊಂಡರೂ ಬಿಟ್ಟಿಲ್ಲ ಎಂದರೆ ಅಂತಹವರನ್ನು ದೇವರೆ ನೋಡಿಕೊಳ್ಳಲಿ ಎಂದು ತಿಳಿಸಿದರು.

Related Post