ಬೆಂಗಳೂರು: ಮಗ ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ ತಾಯಿ ಆ ನೋವಿನಲ್ಲೇ ಮಗ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದಿರುವ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಾವೇರಿಪುರದಲ್ಲಿ ನೆಲೆಸಿದ್ದ ಕ್ಯಾಬ್ ಚಾಲಕನಾಗಿದ್ದ ಅರುಣ್ ಕುಮಾರ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದನು. ಕೋಣೆಯಲ್ಲಿ ಮಲಗಿದ್ದ ಮಗನಿಗೆ ಕಾಫಿ ಕೊಡಲು ಹೋಗಿದ್ದ ತಾಯಿಗೆ ಮಗು ನೇಣು ಬಿಗಿದುಕೊಂಡಿರುವುದನ್ನು ನೋಡಿ ಬರಸಿಡಿಲು ಬಡಿದಂತಾಗಿತ್ತು. ಮಗನ ಶವ ಮುಂದೆ ಕುಳಿತು ರೋದಿಸುತ್ತಿದ್ದ 78 ವರ್ಷದ ಸರಸ್ವತಿ ಮೃತಪಟ್ಟಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಅರುಣ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.