Trending

ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ?: ಕೈಯಲ್ಲಿ ಸಿಗರೇಟ್, ಕಾಫಿ ಮಗ್ ಹಿಡಿದಿರುವ ಫೋಟೋ ವೈರಲ್

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳು ಆಗಿಬರುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಜೈಲಿನಲ್ಲಿ ದರ್ಶನ್ ಇರುವ ಮೊದಲ ಫೋಟೋ ಬಿಡುಗಡೆಯಾಗಿದೆ.

ಸ್ಪೇಷಲ್ ಬ್ಯಾರಕ್ ಹೊರಗೆ ನಟ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಜೊತೆ ದರ್ಶನ್ ಕುಳಿತಿದ್ದಾರೆ.

ಫೋಟೋದಲ್ಲಿ ನಟ ದರ್ಶನ್ ಕೈಯಲ್ಲಿ ಸಿಗರೇಟು ಮತ್ತು ಕಾಫಿ ಮಗ್ ಹಿಡಿದುಕೊಂಡಿರುವುದು ಕಾಣಬಹುದು.

ಫೋಟೋ ತೆಗೆದದ್ದು ಯಾರು?: ಜೈಲಿನ ಒಳಗಡೆ ಕಟ್ಟುನಿಟ್ಟಿನ ನಿಯಮಗಳಿರುವುದರಿಂದ ದರ್ಶನ್‌ ಅವರ ಫೋಟೋ ತೆಗದು ಲೀಕ್‌ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಕೈದಿಯೊಬ್ಬರು ದೂರದಿಂದ ಫೋಟೋ ತೆಗೆದು ಅದನ್ನು ಹಂಚಿದ್ದಾರೆ ಎಂದು ಹೇಳಲಾಗುತ್ತಿದೆ.

ಜೈಲಿನಲ್ಲಿ ನಗುಮುಖದಿಂದ ಇರುವ ದರ್ಶನ್‌, ಐಷಾರಾಮಿ ಜೀವನದ ಸೌಲಭ್ಯ ಸಿಗುತ್ತಿದೆಯೇ? ಎನ್ನುವ ಅನುಮಾನ ಶುರುವಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

[pj-news-ticker]