Breaking
Sun. Sep 8th, 2024

ಕರ್ನಾಟಕ ಬಜೆಟ್‌ 2024: ಮುಖ್ಯಾಂಶಗಳು

By Mooka Nayaka News Feb 16, 2024
Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವ ಹೊತ್ತಲ್ಲಿ ಈ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸರ್ಕಾರ ತೆರಿಗೆ ಪಾಲು ನೀಡುತ್ತಿಲ್ಲ ಅನ್ನೋ ಆರೋಪಗಳ ನಡುವಲ್ಲೇ ಮಂಡನೆಯಾಗಿರುವ ಬಜೆಟ್‌ನ ಮುಖ್ಯಾಂಶಗಳೇನು? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಬಿಯರ್ ದರ ಮತ್ತೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲು

ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ಹೋಟೆಲ್ ಕೆಫೆ ನಿರ್ಮಾಣ – ಸ್ಥಳೀಯ ಆಹಾರಕ್ಕೆ ಒತ್ತು

ಖಜಾನೆಯಲ್ಲಿ ದುಡ್ಡಿಲ್ಲ, ಗ್ಯಾರಂಟಿ ಯೋಜನೆಯಿಂದ ದಿವಾಳಿ ಅನ್ನೋ ಆರೋಪಗಳಿಗೆ ಬಜೆಟ್‌ನಲ್ಲಿ ತಿರುಗೇಟು

ಬಜೆಟ್‌ನಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳ ಸದಸ್ಯರ ಆಕ್ರೋಶ

ವಿಪಕ್ಷಗಳ ಕೋಲಾಹಲದ ನಡುವಲ್ಲೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯಸಿದ್ದರಾಮಯ್ಯ

ಬಜೆಟ್ ಓದುತ್ತಿದ್ದ ಸಂದರ್ಭದಲ್ಲೇ ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರೂಪಿಸಲು ಸರ್ಕಾರದ ತೀರ್ಮಾನ

ಬೆಂಗಳೂರು ನಗರ ವಿಶ್ವದರ್ಜೆಗೇರಿಸಲು ಬ್ರಾಂಡ್ ಬೆಂಗಳೂರು

ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಸುರಂಗ ಮಾರ್ಗ ಪರಿಹಾರ

ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ

ಹೊಸದಾಗಿ 44 ಕಿ. ಮೀ. ಮೆಟ್ರೋ ಮಾರ್ಗ ಸೇರ್ಪಡೆ

ವಿಮಾನ ನಿಲ್ದಾಣ ಮೆಟ್ರೋ ಮಾರ್ಗ 2026ಕ್ಕೆ ಪೂರ್ಣ

ಕಾವೇರಿ ಹಂತ – 5: ಡಿಸೆಂಬರ್ 2024ರ ಒಳಗೆ ಕಾಮಗಾರಿ ಪೂರ್ಣ

ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆ ಅಭಿವೃದ್ದಿಗೆ 150 ಕೋಟಿ ರೂ. ಅನುದಾನ

ಸಿಎಂ ಸಿದ್ದು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಮೀಸಲು

ಆನೇಕಲ್, ನೆಲಮಂಗಲದಲ್ಲಿ ಹೊಸ ಆಸ್ಪತ್ರೆ

ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ

ಮಾಜಿ ಸಿಎಂ ಎಸ್. ಬಂಗಾರಪ್ಪ ಸ್ಮಾರಕ ನಿರ್ಮಾಣ ಘೋಷಣೆ

ಬಸವ ಜಯಂತಿ ಮಂಗಳೂರಿನಲ್ಲಿ ಹಜ್ ಭವನ ಕಾಮಗಾರಿಗೆ 10 ಕೋಟಿ ರೂ

ವಿಜಯಪುರದಲ್ಲಿ ತೋಟಗಾರಿಕಾ ಕಾಲೇಜು

ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ

ಸಿರಿಧಾನ್ಯಗಳಿಗಾಗಿ ‘ನಮ್ಮ ಮಿಲ್ಲೆಟ್’ ಹೊಸ ಯೋಜನೆ ಪ್ರಾರಂಭ

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್

80 ವರ್ಷ ದಾಟಿದ ವೃದ್ಧರಿಗೆ ಆಹಾರ ಒದಗಿಸಲು ‘ಅನ್ನ ಸುವಿಧಾ’ ಯೋಜನೆ

ಕಲ್ಯಾಣ ಪಥ ಯೋಜನೆ ಅಡಿ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ ಅಭಿವೃದ್ದಿ

Related Post