Breaking
Sun. Sep 8th, 2024

ಆನಂದಪುರ : ಸ್ನೇಹಿತನ ಜೊತೆ ಪ್ರವಾಸಕ್ಕೆಂದು ಬಂದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

By Mooka Nayaka News Aug 23, 2024
Spread the love

ಆನಂದಪುರ : ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಆನಂದಪುರ ಸಮೀಪದ ಮಹಂತಿನ ಮಠದ ಚಂಪಕ ಸರಸುವಿನಲ್ಲಿ ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುತ್ತಾನೆ.

ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆ ಕುಪ್ಪಳಿಗೆ ತೆರಳುವ ಉದ್ದೇಶದಿಂದ ಪ್ರವಾಸಕ್ಕೆಂದು ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬರೋಣ ಎಂಬ ಹಿನ್ನೆಲೆ ಚಂಪಕ ಸರಸುವಿಗೆ ಬಂದ ಕುಶಾಲ್ ಮತ್ತು ತಂಡದವರು ಫೋಟೋಶೂಟ್ ಕೂಡ ಮಾಡಿದ್ದಾರೆ.

ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆದರೆ ಕೆಲ ಹೊತ್ತಿನಲ್ಲಿ ನೀರಿನಲ್ಲಿ ಮುಳುಗಿದ ವ್ಯಕ್ತಿ ನಾಪತ್ತೆಯಾಗಿದ್ದು ಆತನ ಸ್ನೇಹಿತರಿಗೆ ಭಯವನ್ನುಂಟುಮಾಡಿದೆ, ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ.

ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

Related Post