ಮಂಗಳೂರು: ಬೆಂಗಳೂರಿನ ಬಳಿಕ ಕರಾವಳಿಯ ಜಾನ ಪದ ಕ್ರೀಡೆ ಕಂಬಳವನ್ನು ಶಿವ ಮೊಗ್ಗದ ಮಾಚೇನಹಳ್ಳಿಯಲ್ಲಿ 2025ರ ಎ.19 ಹಾಗೂ 20ರಂದು ಆಯೋಜಿಸಲಾಗುತ್ತಿದೆ ಎಂದು ಕಂಬಳ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನ ಹಾಗೂ ಶಿಸ್ತು ಪಾಲಿಸಿಕೊಂಡು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಮಾಜಿ ಸಚಿವ ಈಶ್ವರಪ್ಪ, ರೋಟರಿ ಸಂಸ್ಥೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ಕಂಬಳ ಸಂಪ್ರದಾಯ, ಆಚಾರ ವಿಚಾರ, ಒಳಗೊಂಡ ವಿಶಿಷ್ಟ ಕ್ರೀಡೆ.ಕಂಬಳ ಕರೆ, ನೀರಿನ ವ್ಯವಸ್ಥೆ, ಕೋಣಗಳು ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿದೆ. ಕರಾವಳಿ ಭಾಗದಿಂದ ಕೋಣಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಶಿವಮೊಗ್ಗ ಕಂಬಳ ಆಯೋಜನ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ ರೈ ಮತ್ತಿತರರು ಉಪಸ್ಥಿತರಿದ್ದರು.