Breaking
Tue. Jul 16th, 2024

ಶಿವಮೊಗ್ಗ: ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ, ಕಾಲಿಗೆ ಗುಂಡು ಹೊಡೆದು ಆರೋಪಿ ಸೆರೆ

By Mooka Nayaka News Jul 9, 2024
Spread the love

ಶಿವಮೊಗ್ಗ: 5 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಹಿನ್ನೆಲೆ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿಯಲಾಗಿದೆ.

ವಿನೋಬನಗರ ಪೊಲೀಸ್ ಠಾಣೆಯಲ್ಲಿ ರಜಾಕ್ ವಿರುದ್ಧ ಕೊಲೆ ಯತ್ನ ಹಾಗೂ ಗಾಂಜಾ ಮಾರಾಟ ಸೇರಿ 5 ಪ್ರಕರಣಗಳಿದ್ದವು.

ಆರೋಪಿಯ ಸ್ಥಳ ಪತ್ತೆ ಹಚ್ಚಿ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ನೇತೃತ್ವದಲ್ಲಿ ಬಂಧಿಸಲು ತೆರಳಲಾಗಿತ್ತು.

ಈ ವೇಳೆ ಆತ ಪೊಲೀಸ್ ಕಾನ್ಸ್‌ಟೇಬಲ್ ಅರ್ಜುನ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ. ಎಷ್ಟೇ ಹೇಳಿದರೂ ಸರೆಂಡರ್ ಆಗದ ಹಿನ್ನೆಲೆ ಪಿಐ ಲಕ್ಷ್ಮಿಪತಿ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದರು. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾತನಹಳ್ಳಿ ಫಾರೆಸ್ಟ್  ಬಳಿ ಈ ಘಟನೆ ನಡೆದಿದೆ‌.

Related Post