Breaking
Tue. Jul 16th, 2024

ತೀರ್ಥಹಳ್ಳಿ : ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

By Mooka Nayaka News Jul 8, 2024
Spread the love

ತೀರ್ಥಹಳ್ಳಿ: ರಾಜ ಕಾಲುವೆ ಮತ್ತು ಗುಡ್ಡದನೀರು ತಮ್ಮ ಜಮೀನಿನ ಮೂಲಕ ಹೋಗುತ್ತದೆ ಈ ವಿಚಾರದಲ್ಲಿ ಗ್ರಾಮಸ್ಥರ ನಡುವೆ ಗಲಾಟೆ ನಡೆದು ನಂತರ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಅರಳಸುರುಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಿಸರ ಗ್ರಾಮದ ಸರ್ವೇ ನಂ 125 ಹಾಗೂ 126 ರ ಜಾಗದ ಮಾಲೀಕರು ದಿನೇಶ್ (45 ವರ್ಷ ) ಹಾಗೂ ಸತೀಶ್ (49 ವರ್ಷ ) ಎಂಬುವರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಬ್ಬರನ್ನು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

Related Post