Breaking
Mon. Oct 14th, 2024

ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಮೈಸೂರು ದಸರಾ ಆನೆ ದುರಂತ ಸಾವು

By Mooka Nayaka News Jun 11, 2024
Spread the love

ಮೈಸೂರು : ಮೈಸೂರು ದಸರಾದಲ್ಲಿ  ಬರೊಬ್ಬರಿ 8 ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಮತ್ತೊಂದು ದಸರಾ ಆನೆ ಮೃತಪಟ್ಟಿದೆ.

ವಿದ್ಯುತ್ ತಂತಿ ತುಳಿದು ದಸರಾ ಆನೆ ಅಶ್ವತ್ಥಾಮ ದುರಂತ ಅಂತ್ಯಕಂಡಿದ್ದಾನೆ. ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಲ್ಲಿ ಹಾಕಲಾಗಿರುವ ಸೋಲಾರ್ ತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಅಶ್ವತ್ಥಾಮ ಸಾವನ್ನಪ್ಪಿದ್ದಾನೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಹುಣಸೂರು ಪಿರಿಯಾಪಟ್ಟಣ ಗಡಿ ಭಾಗದಲ್ಲಿರುವ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮ ಆನೆ, ಎರಡು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. 2017ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಅಶ್ವತ್ಥಾಮ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನು ಪಳಗಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಕರೆತರಲಾಗಿತ್ತು. ಶಾಂತ ಹಾಗೂ ಗಾಂಭಿರ್ಯಕ್ಕೆ ಅಶ್ವತ್ಥಾಮ ಆನೆ ಹೆಸರುವಾಸಿಯಾಗಿತ್ತು.

Related Post