Breaking
Mon. Oct 14th, 2024

ಬಿ.ವೈ.ರಾಘವೇಂದ್ರ ಭರ್ಜರಿ ಮುನ್ನಡೆ: ಸಂಭ್ರಮಾಚರಣೆ ಆರಂಭ

By Mooka Nayaka News Jun 4, 2024
Spread the love

ಶಿವಮೊಗ್ಗ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುವುದು ಬಹುತೇಕ ಸ್ಪಷ್ಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.

13 ನೇ ಸುತ್ತಿನ ಮತ ಎಣಿಕೆ ಬಳಿಕ ರಾಘವೇಂದ್ರ 1,05,927 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿ.ವೈ ರಾಘವೇಂದ್ರ – 354207, ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ – 242280 ಮತಗಳು ಮತ್ತು ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿಯಾಗಿರುವ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ 14,414 ಮತಗಳನ್ನು ಪಡೆದಿದ್ದಾರೆ.

ಚಾಮರಾಜನಗರ, ದಾವಣಗೆರೆ, ಕಲಬುರಗಿ , ಬೀದರ್ , ಹಾಸನ, ಚಿಕ್ಕೋಡಿ, ಕೊಪ್ಪಳ ಮತ್ತು ಬೆಂಗಳೂರು ಸೆಂಟ್ರಲ್ ನಲ್ಲಿ ಮುನ್ನಡೆ ಕಾಯ್ದು ಕೊಂಡಿದೆ

ಬೆಂಗಳೂರು ದಕ್ಷಿಣ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಮಂಗಳೂರು, ಚಿತ್ರದುರ್ಗ ದಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದೆ. ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಜಿದ್ದಾ ಜಿದ್ದಿನ ಸ್ಪರ್ಧೆ ಕಂಡು ಬಂದಿದೆ.

Related Post