ಶಿವಮೊಗ್ಗ: ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆರಂಭಿಕ ಮುನ್ನಡೆಯನ್ನು ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಆ ಮೂಲಕ, ಗೀತಾ ಅವರು ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಈಶ್ವರಪ್ಪನವರ ಮಾತು ಹುಸಿಯಾಗಿದೆ. ಖುದ್ದು, ಈಶ್ವರಪ್ಪ ಊಹಿಸಲೂ ಅಸಾಧ್ಯವಾದಂತಹ ಸೋಲು ಎದುರಿಸುವ ಸಾಧ್ಯತೆಯಿದೆ.
ಮಾಹಿತಿಯ ಪ್ರಕಾರ, ಈಶ್ವರಪ್ಪನವರಿಗೆ ಠೇವಣಿ ಉಳಿದುಕೊಳ್ಳುವ ಸಾಧ್ಯತೆಯೂ ಕಷ್ಟ ಎನ್ನುವಂತಿದೆ. ಇದುವರೆಗೆ ಈಶ್ವರಪ್ಪ ಕೇವಲ 7,512 ಮತಗಳನ್ನು ಮಾತ್ರ ಪಡೆದಿದ್ದಾರೆ. ಈಶ್ವರಪ್ಪನವರ ಬಿರುಸಿನ ಪ್ರಚಾರ, ನೀರಿನಲ್ಲಿ ಹೋಮ ಮಾಡಿದಂತಿದೆ.
ಮತಎಣಿಕೆಯ ಒಂದು ದಿನದ ಮುನ್ನವೂ ಈಶ್ವರಪ್ಪ ಗೆಲುವಿನ ಮಾತನ್ನು ಆಡಿದ್ದರು. ಆದರೆ, ಈ ರೀತಿಯ ಹಿನ್ನಡೆಯನ್ನು ಬಹುಷಃ ಈಶ್ವರಪ್ಪನವರೇ ಊಹಿಸಿರಲು ಸಾಧ್ಯವಿಲ್ಲ. ಬಿಜೆಪಿ ಅದಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪನವರ ವಿರುದ್ದ ಈಶ್ವರಪ್ಪ ಬಂಡಾಯ ಎದ್ದಿದರು.