Trending

ಶಿವಮೊಗ್ಗ : ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ

Spread the love

ಶಿವಮೊಗ್ಗ: ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ನಗರದ ಆರ್ ಎಂ ಎಲ್ ನಗರದ ಸಮೀಪ ನಡೆದಿದೆ.

ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಂದನ್ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.

ಅನ್ಯ ಕೋಮಿನ ಸಹೋದ್ಯೋಗಿಯನ್ನು ನಂದನ್ ಕೆಲಸದ ನಿಮಿತ್ತ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 20 ಕ್ಕೂ ಹೆಚ್ಚು ಯುವಕರು ನಂದನ್ ನನ್ನು ತಡೆದು ಥಳಿಸಿದ್ದರು. ನಮ್ಮ ಸಮುದಾಯದ ಹುಡುಗಿಯನ್ನು ಯಾಕೆ ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ ಯುವಕರ ಗುಂಪು ಥಳಿಸಿದೆ.

ಘಟನೆಯಲ್ಲಿ ನಂದನ್ ಗೆ ಕಣ್ಣು, ಕಿವಿ ಮತ್ತು ಬಾಯಿಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಸಕ ಚನ್ನಬಸಪ್ಪ ಭೇಟಿ: ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ನಂದನ್ ಆರೋಗ್ಯ ವಿಚಾರಿಸಿದರು. ನಂದನ್ ಗೆ ಧೈರ್ಯ ಹೇಳಿ, ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.

ವಿಜಯೇಂದ್ರ ಟೀಕೆ:  ಘಟನೆ ಬಗ್ಗೆ ಎಕ್ಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಅಭದ್ರತೆಯ ಸ್ಥಿತಿಗೆ ತಳ್ಳುತ್ತಿರುವ ಕಾಂಗ್ರೆಸ್ ರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೊಲೀಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಒತ್ತಾಯಿಸುವೆ ಎಂದು ಪೋಸ್ಟ್ ಮಾಡಿದ್ದಾರೆ.

[pj-news-ticker]