ಶಿವಮೊಗ್ಗ: ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಪಕ್ಷ ಎಲ್ಲಾ ಒಳ್ಳೆಯ ಸ್ಥಾನಮಾನ ಕೊಟ್ಟಿತ್ತು. ಆದರೂ ಚುನಾವಣೆಗೆ ಹಠ ಮಾಡಿ ಸ್ಪರ್ಧಿಸಿದ್ದಾರೆ. ರಘುಪತಿ ಭಟ್ ಸ್ಪರ್ಧೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು 20 ರಿಂದ 22 ಸ್ಥಾನ ಗೆಲ್ಲುತ್ತೇವೆ. ಪರಿಷತ್ ಗೆ ಚುನಾವಣೆ ನಡೆಯುತ್ತಿದೆ. ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಗೆಲ್ಲುತ್ತಾರೆ. ವಾತಾವರಣ ಅನುಕೂಲಕರವಾಗಿದೆ. ಪರಿಷತ್ ನಲ್ಲಿ ಎಂಟು ಸ್ಥಾನ ಗೆಲ್ಲುತ್ತೇವೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ, ಅಹಿತಕರ ಘಟನೆ ಅದು. ಹೆಸರು ಬರೆದಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಚಿವರೇ ರಾಜೀನಾಮೆ ಕೊಟ್ಟು ಅವರ ಗೌರವ ಉಳಿಸಿಕೊಳ್ಳಬೇಕು ಎಂದು ಬಿಎಸ್ವೈ ಹೇಳಿದರು.