ರಾಜಸ್ಥಾನ: ಮೂತ್ರಕೋಶದ ಕಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳೆಯ ಮೂತ್ರಕೋಶವನ್ನೇ ತೆಗೆದ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸದ್ಯ ಚಿಕಿತ್ಸೆಗೊಳಗಾದ ಮಹಿಳೆಯ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ:
ರಾಜಸ್ಥಾನದ ಜುಂಜುನುವಿನಲ್ಲಿ ನುವಾ ಗ್ರಾಮದ ಮೂವತ್ತು ವರ್ಷದ ಮಹಿಳೆಯಾದ ಈದ್ ಬಾನೊ ಅವರು ಕೆಲ ದಿನಗಳಿಂದ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಈ ಬಗ್ಗೆ ತಪಾಸಣೆ ನಡೆಸಲು ರಾಜಸ್ಥಾನದಲ್ಲಿರುವ ಡಾ.ಸಂಜಯ್ ಧಂಖರ್ ಒಡೆತನದ ಧಂಖರ್ ಆಸ್ಪತ್ರೆಗೆ ತೆರಳಿದ್ದಾರೆ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಮೂತ್ರಕೋಶದ ಕಲ್ಲಿನಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ ಅಲ್ಲದೆ ಮೂತ್ರಕೋಶದ ಕಲ್ಲಿನಿಂದಾಗಿ ಒಂದು ಮೂತ್ರಕೋಶಕ್ಕೆ ಹಾನಿಯಾಗಿದೆ ಅದನ್ನು ತೆಗೆಯಬೇಕು ಎಂದು ಹೇಳಿದ್ದಾರೆ. ಅದರಂತೆ ಮಹಿಳೆಯ ಕುಟುಂಬ ಒಪ್ಪಿಗೆಯನ್ನು ನೀಡಿತ್ತು.
ಕೂಡಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿ ಮಹಿಳೆಯನ್ನು ಆಪರೇಷನ್ ರೂಮ್ ಒಳಗೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಘಾಸಿಯಾದ ಮೂತ್ರಕೋಶ ತೆಗೆಯುವ ಬದಲು ಉತ್ತಮಸ್ಥಿತಿಯಲ್ಲಿದ್ದ ಮೂತ್ರಕೋಶವನ್ನು ತೆಗೆದಿದ್ದಾರೆ.
ಇದಾದ ಬಳಿಕ ಕೆಲ ದಿನಗಳ ಬಳಿಕ ಮಹಿಳೆ ಆಸ್ಪತ್ರೆಗೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ ಈ ವೇಳೆ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದೆ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ಚಿಕಿತ್ಸೆ ನೀಡಿದ ವೈದ್ಯರು ಬೇರೊಂದು ಆಸ್ಪತ್ರೆಗೆ ಕಳುಹಿಸಿದ್ದಾರೆ ಅದರಂತೆ ಮಹಿಳೆಯ ಕುಟುಂಬ ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ ವೇಳೆ ಘಾಸಿಯಾದ ಕಿಡ್ನಿ ತೆಗೆಯುವ ಬದಲು ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿದ್ದ ಕಿಡ್ನಿಯನ್ನು ತೆಗೆದಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ಮಹಿಳೆಯ ಕುಟುಂಬಸ್ಥರಿಗೆ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಆದರೆ ವೈದ್ಯರು ಕುಟುಂಬದ ಆರೋಪವನ್ನು ತಳ್ಳಿ ಹಾಕಿದ್ದು ಇದಾದ ಕೆಲವೇ ಹೊತ್ತಿನಲ್ಲಿ ವೈದ್ಯರು ಮಹಿಳೆಯ ಮನೆಗೆ ತೆರಳಿ ಬೇರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಹಣವನ್ನು ನೀಡಿ ಮನವಿ ಮಾಡಿಕೊಂಡಿದ್ದಾರೆ ಆದರೆ ಮಹಿಳೆಯ ಕುಟುಂಬಸ್ಥರು ವೈದ್ಯರು ನೀಡಿರುವ ಹಣವನ್ನು ತಿರಸ್ಕರಿಸಿ ತಮಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ವೈದ್ಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದ್ದು ಜೊತೆಗೆ ಆಸ್ಪತ್ರೆಯಲ್ಲಿರುವ ದಾಖಲೆಪತ್ರಗಳನ್ನು ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.