Trending

ಉದ್ಯಮದಲ್ಲಿ ನಷ್ಟ, ಹೆಚ್ಚಿದ ಸಾಲ: ಹೋಟೆಲ್ನಲ್ಲಿ ಶಿವಮೊಗ್ಗ ಕ್ರಷರ್ ಉದ್ಯಮಿ ಆತ್ಮಹತ್ಯೆ

Spread the love

ಶಿವಮೊಗ್ಗ: ಉದ್ಯಮದಲ್ಲಿ ನಷ್ಟ ಅನುಭವಿಸಿದ ಶಿವಮೊಗ್ಗದ ಉದ್ಯಮಿಯೊಬ್ಬರು ಹೋಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ನಗರದ ಗೋಪಾಲಗೌಡ ಬಡಾವಣೆಯ ನಿವಾಸಿ ನವೀನ್ ಕುಮಾರ್ ಅಲಿಯಾಸ್ ಬಸವರಾಜು (38) ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ.

ಶಿವಮೊಗ್ಗದ ಹೊರವಲಯದ ಬಸವನಗಂಗೂರು ಗ್ರಾಮದಲ್ಲಿ ನವೀನ್ ಕುಮಾರ್ ಅವರು ಕಲ್ಲು ಕ್ರಷರ್ ನಡೆಸುತ್ತಿದ್ದರು. ಆದರೆ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಬಫರ್ ಜೋನ್ ಕಾರಣ ನೀಡಿ ಕ್ರಷರ್ಗಳನ್ನು ಬಂದ್ ಮಾಡಿಸಲಾಗಿತ್ತು. ಇದರಿಂದ ನಷ್ಟ ಉಂಟಾಗಿತ್ತು.

ಪರಿಣಾಮ ಸಾಲದ ಜೊತೆಗೆ ಬಡ್ಡಿಯು ಬೆಳೆಯುತ್ತಿತ್ತು. ಮನೆ ಬಳಿ ಸಾಲಗಾರರು ಬರುತ್ತಿದ್ದರು‌‌. ಸಾಲಗಾರರ ಕಾಟ ಹೆಚ್ಚಾಗಿತ್ತು. ಇದರಿಂದ ಮನೆಯಲ್ಲಿ ನವೀನ್ ಹೆಚ್ಚಾಗಿ‌ ಇರುತ್ತಿರಲಿಲ್ಲ. ಭಾನುವಾರ ಶಿವಮೊಗ್ಗದ ಸಾಗರ ರಸ್ತೆಯ ಅಶೋಕ್ ಗ್ರಾಂಡ್ ಲಾಡ್ಜ್ನಲ್ಲಿ ರೂಮ್ ಬಾಡಿಗೆಗೆ ಪಡೆದು, ಬಳಿಕ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ರಾತ್ರಿಯಾದ್ರೂ ಸಹ ರೂಮ್ ಬಾಗಿಲು ತೆಗೆದಿರಲಿಲ್ಲ. ಬಳಿಕ ಹೋಟೆಲ್ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಬಾಗಿಲು ತೆರೆದು ನೋಡಿದಾಗ ನವೀನ್ ಅವರು ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ನಂತರ ಅವರ ಕುಟುಂಬಸ್ಥರು ಬಂದು ಗುರುತಿಸಿದ ನಂತರ ಶವವನ್ನು ಕೆಳಗೆ ಇಳಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

[pj-news-ticker]