ಶಿವಮೊಗ್ಗ : ಹುಚ್ಚಾಟ ಮೆರೆದ ಯುವಕನೊಬ್ಬ ಹೆದ್ದಾರಿಯಲ್ಲೇ ಲಾಂಗ್ ಹಿಡಿದು ಓಡಾಡಿ ಆತಂಕ ಹುಟ್ಟಿಸಿದ ಘಟನೆ ಸಾಗರ ತಾಲೂಕಿನ ಆನಂದಪುರದಲ್ಲಿ ರವಿವಾರ ನಡೆದಿದೆ.
ಯುವಕನನ್ನು ಗಮನಿಸಿದ ಸ್ಥಳೀಯರು ಲಾಂಗ್ ಕಸಿದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕನನ್ನ ಆನಂದಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಾರು ಚಾಲಕರೊಬ್ಬರು ಲಾಂಗ್ ಹಿಡಿದು ಓಡಾಡಿದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.