Breaking
Sat. Oct 12th, 2024

ಚುನಾವಣೆಗೂ ಮುನ್ನವೇ ಬಿಜೆಪಿ ಜೆಡಿಎಸ್ ಡಿವೋರ್ಸ್ ಹಂತಕ್ಕೆ: ಕಾಂಗ್ರೆಸ್ ಟೀಕೆ

By Mooka Nayaka News Apr 25, 2024
Spread the love

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಡಿವೋರ್ಸ್ ಹಂತಕ್ಕೆ ಬಂದಿರುವಂತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರ ಹೇಳಿಕೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಒತ್ತಾಯದ ಮದುವೆ, ಒಲ್ಲದ ಸಂಸಾರದ ಆಯಸ್ಸು ಕಡಿಮೆ ಎನ್ನುವ ಸಂಗತಿ ಎರಡೂ ಪಕ್ಷಗಳಿಗೆ ಅರ್ಥವಾದಂತಿದೆ ಎಂದು ಲೇವಡಿ ಮಾಡಿದೆ.

ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಶತಾಯಗತಾಯ ಜೆಡಿಎಸ್ ಗೆಲ್ಲಬಾರದು ಎಂದು ತೊಡೆ ತಟ್ಟಿದ್ದಾರಂತೆ, ಮಂಡ್ಯದಲ್ಲಿ ಸುಮಲತಾ ದೂರದೂರವಂತೆ! ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಸೇರಿದ್ದಾರಂತೆ. ಜೆಡಿಎಸ್ ಪಕ್ಷಕ್ಕೆ ರಾಜ್ಯ ಬಿಜೆಪಿಯ ಅಪಾಯಕಾರಿ ಸಾಂಗತ್ಯದ ಅರಿವಾಗುವುದರ ಒಳಗಾಗಿ ಕಾಲ ಮಿಂಚಿದೆ. ನಂಬಿಸಿ ಕತ್ತು ಕೊಯ್ಯುವ ಬಿಜೆಪಿಯ ಸಖ್ಯ ಜೆಡಿಎಸ್ ಪಕ್ಷವನ್ನು ಮುಳುಗಿಸಲಿದೆ. ದೇವೇಗೌಡರ ಮಾತುಗಳೇ ಇದಕ್ಕೆ ಸಾಕ್ಷಿ ಹೇಳುತ್ತಿವೆ ಎಂದು ಕಾಂಗ್ರೆಸ್ ಹೇಳಿದೆ.

Related Post