Spread the love

ಮುಂಬಯಿ: ಸುಮಾರು 10 ವರ್ಷಗಳ ಹಿಂದೆ ನಡೆದ ನಟಿ ಜಿಯಾ ಖಾನ್​ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ (32) ಅವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ನಟಿ ಜಿಯಾ ಖಾನ್​ ಅವರು 2013ರ ಜೂನ್​ 3ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಜಿಯಾ ಬರೆದಿದ್ದಾಳೆ ಎನ್ನಲಾದ ಆರು ಪುಟಗಳ ಡೆತ್​ನೋಟ್​ ಆಧಾರದ ಮೇಲೆ ಸೂರಜ್ ಪಾಂಚೋಲಿಯನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದರು.

ಸಿಬಿಐನ ವಿಶೇಷ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಜಿಯಾ ಖಾನ್​  ಅವರ ತಾಯಿ ರಬಿಯಾ ಮಾಡಿದ ಮನವಿಯನ್ನು ಮುಂಬೈ ಹೈಕೋರ್ಟ್​ ತಿರಸ್ಕರಿಸಿತು.

ಜಿಯಾ ಖಾನ್‌ ಅವರ ತಾಯಿ ರಬಿಯಾ  ಅವರ ನಿರಂತರ ಮನವಿ ಹಾಗೂ ಪ್ರಕರಣ ಸಂಬಂಧ ಮುಂಬೈ ಹೈಕೋರ್ಟ್‌ 2014ರ ಜು. 3ರಂದು ನೀಡಿದ್ದ ನಿರ್ದೇಶನದಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಎ.​ 20ರಂದು ಅಂತಿಮ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಇದೀಗ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಎಸ್​ ಸಯ್ಯದ್​, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಆದೇಶಿಸಿದ್ದಾರೆ.

 

Leave a Reply

Your email address will not be published. Required fields are marked *