Breaking
Sun. Sep 8th, 2024

ಈಶ್ವರಪ್ಪ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗಲ್ಲ : ಸಚಿವ ಮಧು ಬಂಗಾರಪ್ಪ

By Mooka Nayaka News Apr 12, 2024
Spread the love

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮನ್ನು ರಾಜಕೀಯವಾಗಿ ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ. ಅದು ಬಿಜೆಪಿಯೊಳಗಿನ ಆಂತರಿಕ ಕಲಹ. ಈಶ್ವರಪ್ಪ ಬಿಜೆಪಿಯ ಬಿ ಟೀಂ. ಈಶ್ವರಪ್ಪ ಅವರನ್ನು ವ್ಯಕ್ತಿಗತವಾಗಿ ನೊಡಿದರೆ ಬೇಸರವಾಗುತ್ತೆ. ಆದರೆ ಅವರ ಸಿದ್ದಾಂತ ನೋಡಿ ಮರುಕ ಹುಟ್ಟುತ್ತಿಲ್ಲ’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿರುದ್ಧ ಹಗುರವಾಗಿ ಮಾತಾಡುವುದು, ಟೀಕೆ ಮಾಡುವುದು ನಿಲ್ಲಿಸಿ. ಗೀತಾ ವಿಷಯಕ್ಕೆ ಬರಬೇಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಾಕೀತು ಮಾಡಿದ ಮಧು ಬಂಗಾರಪ್ಪ, ‘ನಿಮ್ಮ ಹಣೇಬರಹವನ್ನು ಈಶ್ವರಪ್ಪ ಬೀದಿಯಲ್ಲಿಟ್ಟು ಹರಾಜು ಹಾಕುತ್ತಿದ್ದಾರೆ. ಮೊದಲು ಅವರಿಗೆ ಉತ್ತರಕೊಡಿ ಎಂದು ಲೇವಡಿ ಮಾಡಿದರು.

Related Post