Trending

ಶಿವಮೊಗ್ಗ: ಕೆಲಸ ಕೊಡಿ ಇಲ್ಲವೇ ದಯಾಮರಣ ನೀಡಿ : ಅತಿಥಿ ಉಪನ್ಯಾಸಕರ ಸಂಘ

Spread the love

ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಯುಜಿಸಿಯೇತರ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸಿ. ವೆಂಕಟೇಶ್ ಸರ್ಕಾರದ ತೀರ್ಮಾನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕೆಲಸ ಕೊಡಿ ಇಲ್ಲವೇ ನಮಗೆ ದಯಾಮರಣ ನೀಡಿ” ಎಂದು ಮನದಾಳದ ಅಳಲನ್ನು ಅವರು ಹೊರ ಹಾಕಿದ್ದಾರೆ.

ಸುಮಾರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 5,600ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ನವೆಂಬರ್ 24ರಿಂದ ಸೇವೆಯಿಂದ ಕೈಬಿಡುವ ಸರ್ಕಾರದ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

“ವೃದ್ಧ ತಂದೆ-ತಾಯಿಗಳು, ಕುಟುಂಬಗಳು ನಮ್ಮನ್ನು ಅವಲಂಬಿಸಿವೆ. ಕೆಲಸ ಕಳೆದುಕೊಂಡರೆ ನೇರವಾಗಿ ಬೀದಿಗೆ ಬಂದು ನಿಲ್ಲಬೇಕಾದ ಪರಿಸ್ಥಿತಿ” ಎಂದು ಅವರು ಹೇಳಿದ್ದಾರೆ.

ಸರ್ಕಾರ ತಕ್ಷಣ ಕಾಯ್ದೆ ತಿದ್ದುಪಡಿ ಮಾಡಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು, ಇಲ್ಲದಿದ್ದರೆ ಬದುಕಿಗೆ ಬೇರೆ ಮಾರ್ಗವೇ ಉಳಿಯುವುದಿಲ್ಲ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.

[pj-news-ticker]