Trending

ಶಿವಮೊಗ್ಗ : ಸ್ಕೂಟಿಗೆ ಕಾರು ಡಿಕ್ಕಿ: ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ನವ ದಂಪತಿ ದುರ್ಮರಣ

Spread the love

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ನವ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ. ಕಿರಣ್(28) ಮತ್ತು ಸೌಮ್ಯ(25) ಮೃತರು.

ಶರಾವತಿ ನಗರದ ಹಂದಿಜೋಗಿ ಕ್ಯಾಂಪ್​ನ ಕಿರಣ್ ಹಾಗೂ ಗೋವಿಂದಪುರದ ನಿವಾಸಿ ಸೌಮ್ಯ ಪ್ರೀತಿಸಿ ಮದುವೆಯಾಗಿದ್ದರು. ಕಿರಣ್ ವಿರುದ್ಧ ಅವರ ಅತ್ತಿಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪೊಲೀಸರು ಕರೆ ಮಾಡಿದ್ದಕ್ಕೆ ಕಿರಣ್​, ಗೋವಿಂದಪುರಕ್ಕೆ ಹೋಗಿ ಶನಿವಾರ ಪತ್ನಿ ಜತೆ ವಾಪಸ್ಸಾಗುತ್ತಿದ್ದಾಗ ಪೂದಾರ್ ಶಾಲೆಯ ಬಳಿ‌ ತಿರುವಿನಲ್ಲಿ ಡಸ್ಟರ್ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ‌. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನಿಗೆ ಶೋಧ ನಡೆಸುತ್ತಿದ್ದಾರೆ.

ಕಿರಣ್ ಮತ್ತು ಸೌಮ್ಯ ಪ್ರೀತಿಸಿ ಮದುವೆಯಾಗಿದ್ದ ಕಾರಣ ಸೌಮ್ಯ ಕುಟುಂಬಸ್ಥರು ಕಿರಣ್ ಮನೆಗೆ ಹೋಗಿರಲಿಲ್ಲ. ಇದೀಗ ಮಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ತಮಗೆ ಕೊಡಬೇಕೆಂದು ಶವಾಗಾರದ ಮುಂದೆ ಕಿರಣ್ ಕುಟುಂಬಸ್ಥರೊಂದಿಗೆ ಮಾತಿ‌ನ ಚಕಮಕಿ ನಡೆಸಿದರು.

ಇಬ್ಬರ ಮೃತದೇಹಗಳನ್ನು ಕಿರಣ್ ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಿದ್ದಾರೆ‌.

[pj-news-ticker]