Trending

ಗೌತಮಪುರ : ಹಾವು ಕಚ್ಚಿ ರೈತ ಸಾವು

Spread the love

ಆನಂದಪುರ: ತೋಟಕ್ಕೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಸಮೀಪದ ಗೌತಮಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗೌತಮಪುರ ಗ್ರಾಮದ ನಿವಾಸಿ ಎಮ್. ಹುಚ್ಚಪ್ಪ (65) ಮೃತಪಟ್ಟ ದುರ್ದೈವಿ. ಇವರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಪ್ರಗತಿಪರ ರೈತರಾಗಿದ್ದರು.

ಘಟನೆಯ ವಿವರ:
ಮಂಗಳವಾರ (ಮಾ. 17) ರಾತ್ರಿ ಸುಮಾರು 8:30ರ ವೇಳೆಗೆ ಹುಚ್ಚಪ್ಪ ಅವರು ತಮ್ಮ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಕತ್ತಲೆಯಲ್ಲಿ ಅವರ ಎಡಗಾಲಿಗೆ ಯಾವುದೋ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಮನೆಗೆ ಮರಳಿದ ಅವರು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ  ಅವರನ್ನು ಚಿಕಿತ್ಸೆಗಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವಿಷವು ದೇಹವಿಡೀ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:45ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

[pj-news-ticker]