ತೀರ್ಥಹಳ್ಳಿ : ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಪ್ರೊ. ತಿಮ್ಮಪ್ಪ ಗೌಡ (68) ಫೆ.11ರ ಭಾನುವಾರ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.
ಪ್ರೊ.ತಿಮ್ಮಪ್ಪ ಗೌಡ ತಮ್ಮ ಉತ್ತಮ ಬೋಧನೆಯಿಂದಾಗಿ ಕಾಲೇಜಿನಲ್ಲಿ ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವರ ಸ್ವಗೃಹ ಸೊಪ್ಪುಗುಡ್ಡೆಯಲ್ಲಿ ಇಡಲಾಗಿದ್ದು, ಸೊಮವಾರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.