ಮುಂಡಗೋಡ: ಹಜ್ ಯಾತ್ರೆಗೆ ತೆರಳಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮುಂಡಗೋಡದ ಮೂವರು ಮೃತಪಟ್ಟು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಪಟ್ಟಣದ ರೋಣ ಮೆಡಿಕಲ್ ಮಾಲೀಕರಾದ ಫಯಾಜ್ ರೋಣ, ಪತ್ನಿ ಆಪ್ರೀನಾ ಬಾನು, ಅಣ್ಣನ ಮಗ ಆಯಾನ್ ರೋಣ ಸ್ಥಳದಲ್ಲಿಯೇ ಸಾವನ್ನಪ್ಪಿದರೆ. ಫಯಾಜ್ ರೋಣ ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗೊಂಡಿದ್ದಾರೆ.
ಫಯಾಜ್ ರೋಣ ಕುಟಂಬದವರು ಕಳೆದ ಮಾ.26 ರಂದು ಶುಕ್ರವಾರ ರಾತ್ರಿ ಮಕ್ಕಾ ಮದಿನಾ ದರ್ಶನಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದಿನಾ ಹತ್ತಿರ ಸಂಭವಿಸಿದ ರಸ್ತೆ ಅಪಾಘಾತದಲ್ಲಿ ಮೂರು ಜನ ಮೃತಪಟ್ಟರೆ ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ಎಂದು ತಿಳಿದುಬಂದಿದೆ.