Breaking
Sun. Sep 8th, 2024

ರಾಜ್ಯ ಸರ್ಕಾರದಿಂದ ಗೋಬಿ, ಕಬಾಬ್ ಬೆನ್ನಲ್ಲೇ ಕೃತಕ ಬಣ್ಣ ಬಳಸಿದ ‘ಕೇಕ್’ ನಿಷೇಧ?

By Mooka Nayaka News Aug 30, 2024
Spread the love

ಬೆಂಗಳೂರು : ರಾಜ್ಯದಲ್ಲಿ ಗೋಬಿ ಕಬಾಬ್, ಬಳಿಕ ಕೇಕ್ ನಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ಕಲರ್ ಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಒಂದು ವೇಳ ನಿಯಮ ಮೀರಿ ಕಲರ್ ಕ್ಯಾಂಡಿ ಮಾರಾಟ ಮಾಡಿದ್ರೇ ಅಂತವರಿಗೆ 7 ವರ್ಷ ಜೈಲು, 10 ಲಕ್ಷ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಗುಣಮಟ್ಟ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗಿ ಉತ್ತಮವಾಗಿಲ್ಲದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ ಎಂದಿದ್ದಾರೆ.

ಹೀಗಾಗಿ ಕೇಕ್ ನಲ್ಲೂ ಬಳಸುವ ಕೃತಕ ಬಣ್ಣವನ್ನು ನಿಷೇಧಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಕೇಕ್ ನಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆ ಶೀಘ್ರವೇ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

 

Related Post