ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಇಂಡಿಗೋ ವಿಮಾನದ ಸ್ಪೀಕರ್ ಬಾಕ್ಸ್ನೊಳಗೆ ಬಚ್ಚಿಟ್ಟಿದ್ದ 4.26 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಎಂಜಿನಿಯರ್ಗಳ ಸಹಾಯದಿಂದ ಕಸ್ಟಮ್ಸ್ ಅಧಿಕಾರಿಗಳು ಇಂಡಿಗೋ ವಿಮಾನ 6E-1478 ಅನ್ನು ಶೋಧಿಸಿದ ವೇಳೆ ಮುಂಭಾಗದ ಶೌಚಾಲಯದಲ್ಲಿರುವ ಸ್ಪೀಕರ್ ಬಾಕ್ಸ್ನೊಳಗೆ ಕಪ್ಪು ಪ್ಲಾಸ್ಟಿಕ್ ಟೇಪ್ನಲ್ಲಿ ಸುತ್ತಿದ ಎರಡು ಚೀಲಗಳನ್ನು ಪತ್ತೆ ಮಾಡಿದ್ದಾರೆ.
ಪರಿಶೀಲನೆಯ ಸಮಯದಲ್ಲಿ, ಅಧಿಕಾರಿಗಳು 24 ಕ್ಯಾರೆಟ್ 24 ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 2,799.3 ಗ್ರಾಂ ತೂಕವಿದ್ದು ಮೌಲ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಸುಮಾರು 4.27 ಕೋಟಿ ರೂ. ಆಗಿದೆ.
ಮರೆಮಾಚಿ ಚಿನ್ನವನ್ನು ವ್ಯಕ್ತಿಯೊಬ್ಬರು 1962 ರ ಕಸ್ಟಮ್ಸ್ ಕಾಯ್ದೆಯನ್ನು ಉಲ್ಲಂಘಿಸಿ ಭಾರತಕ್ಕೆ ಕಳ್ಳಸಾಗಣೆ ಮಾಡುವ ಉದ್ದೇಶದಿಂದ ಮಾಡಿದ್ದಾರೆ ಎಂದು ಕಂಡು ಬಂದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಪ್ರಯಾಣಿಕರು ಅಥವಾ ಸಿಬಂದಿಗಳು ಚಿನ್ನದ ಮಾಲಕತ್ವ ಹೇಳಲು ಮುಂದೆ ಬಾರದ ಕಾರಣ, ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಚಿನ್ನವನ್ನು ಹಕ್ಕು ಪಡೆಯದ ಚಿನ್ನವೆಂದು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
