Trending

ಶಿವಮೊಗ್ಗ: ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ‌ಯ ಕಾಲಿಗೆ ಪೊಲೀಸರ ಗುಂಡೇಟು

Spread the love

ಶಿವಮೊಗ್ಗ: ಮಹಜರಿಗೆ ಕರೆದೊಯ್ದ ವೇಳೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ, ವಶಕ್ಕೆ ಪಡೆದಿರುವ ಘಟನೆ ಇಂದು ಬೆಳಗಿನ ಜಾವ ಹೊಳೆ ಬೆನವಳ್ಳಿಯ ರಿಂಗ್ ರೋಡ್​​ನಲ್ಲಿ ನಡೆದಿದೆ.

ಜೂನ್ 12 ರಂದು ನಡೆದಿದ್ದ ರೌಡಿಶೀಟರ್ ನರಸಿಂಹ ಕೊಲೆ‌ ಪ್ರಕರಣದ ಪ್ರಮುಖ ಆರೋಪಿ ಮಧು ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಪ್ರಕರಣ ಸಂಬಂಧ ಕೋಟೆ ಪೊಲೀಸರು, ಆರೋಪಿ ಮಧುನನ್ನು ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಮಧು ಶೌಚಕ್ಕೆ ಹೋಗಬೇಕು ಎಂದಿದ್ದ. ಆಗ ಪೊಲೀಸರು ಹೊಳೆ ಬೆನವಳ್ಳಿಯ ರಿಂಗ್ ರೋಡ್​​ ಬಳಿ ಜೀಪ್​ನಿಂದ ಕೆಳಗೆ ಇಳಿಸಿದ್ದರು. ಈ ವೇಳೆ ಕೋಟೆ ಪೊಲೀಸ್ ಠಾಣೆಯ ಕಾನ್ಸಟೇಬಲ್ ಅಂಜನಪ್ಪ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ.

ಆಗ ಶರಣಾಗುವಂತೆ ಕೋಟೆ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಸೂಚಿಸಿದರೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ‌. ಈ ವೇಳೆ ಪಿಎಸ್​ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.‌ ಆದರೂ ಶರಣಾಗದೆ ಹೋದಾಗ ಆತ್ಮ ರಕ್ಷಣೆಗೆ ಮಧು ಕಾಲಿಗೆ ಪಿಎಸ್​ಐ ಗುಂಡು ಹಾರಿಸಿದ್ದಾರೆ. ಪರಿಣಾಮ ಗಾಯಗೊಂಡ ಮಧುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್​​ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ನರಸಿಂಹನ ಪತ್ನಿ ಸ್ನೇಹ ಅವರು ಅಂಬು ಮತ್ತು ಅವರ ತಂಡ ಕೊಲೆ ಮಾಡಿದೆ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೆ ಭದ್ರಾವತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಸ್ಥಳ ಮಹಜರಿಗೆ ಕರೆದಯ್ಯುವ ವೇಳೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಮಧು ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಇನ್ನು ಕೊಲೆಯಾದ ನರಸಿಂಹ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.

[pj-news-ticker]