Trending

ಭಾರತದಲ್ಲಿ ಉತ್ಪಾದಿಸಿದ ಮೊದಲ ಮಾರುತಿ ಸುಜುಕಿ ಇ-ವಿಟಾರಾ ಕಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Spread the love

ಗುಜರಾತ್‌: ದೇಶದಲ್ಲಿ ಕಂಪನಿಯ ಕಾರ್ಯಾಚರಣೆ ಸದೃಢಗೊಳಿಸಲು ಮುಂದಿನ ಐದರಿಂದ ಆರು ವರ್ಷದಲ್ಲಿ ₹70 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ವಾಹನ ತಯಾರಕ ಕಂಪನಿ ಸುಜುಕಿ ಮೋಟರ್‌ ಕಾರ್ಪೊರೇಷನ್‌ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಹಂಸಲಪುರದ ತಯಾರಿಕಾ ಘಟಕದಲ್ಲಿ ತಯಾರಾಗಿರುವ ಮಾರುತಿ ಸುಜುಕಿಯ ಮೊದಲ ವಿದ್ಯುತ್‌ಚಾಲಿತ ವಾಹನ ಇ-ವಿಟಾರಾ ರಫ್ತಿಗೆ ಚಾಲನೆ ನೀಡಿದರು.

ಇದೇ ವೇಳೆ ಲಿಥಿಯಂ-ಐಯಾನ್‌ ಬ್ಯಾಟರಿ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.

ಮಾರುತಿ ಸುಜುಕಿ ಇಂಡಿಯಾದ ಇ-ವಿಟಾರಾ ಜಪಾನ್‌ ಸೇರಿದಂತೆ 100 ರಾಷ್ಟ್ರಗಳಿಗೆ ರಫ್ತಾಗಲಿದೆ. ಈಗಾಗಲೇ ಕಂಪನಿಯು ಭಾರತದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಹೂಡಿಕೆಯು 11 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಕಂಪನಿಯ ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ ತೋಶಿಹಿರೊ ಸುಜುಕಿ ಹೇಳಿದ್ದಾರೆ.

ಗುಜರಾತ್‌ನ ಪಿಪಾವಾವ್‌ ಬಂದರಿನಿಂದ ಬ್ರಿಟನ್‌, ಜರ್ಮನಿ, ನಾರ್ವೆ, ಫ್ರಾನ್ಸ್‌, ಡೆನ್ಮಾರ್ಕ್‌, ಸ್ವಿಟ್ಜರ್ಲೆಂಡ್‌, ನೆದರ್ಲೆಂಡ್ಸ್, ಸ್ವೀಡನ್, ಹಂಗೇರಿ, ಐಸ್‌ಲ್ಯಾಂಡ್‌, ಇಟಲಿ, ಆಸ್ಟ್ರೀಯ ಮತ್ತು ಬೆಲ್ಜಿಯಂಗೆ ಇ-ವಿಟಾರಾದ ವಾಹನಗಳ ಮೊದಲ ಬ್ಯಾಚ್ ಅನ್ನು ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.

[pj-news-ticker]