Trending

ಹುಟ್ಟುಹಬ್ಬದ ಫೋಟೊಶೂಟ್‌ ನೆಪದಲ್ಲಿ ಬೆಲೆಬಾಳುವ ಕ್ಯಾಮೆರಾ ದೋಚಿದ ಕಳ್ಳರು

Spread the love

ಲಖನೌ: ಹುಟ್ಟುಹಬ್ಬ ಪಾರ್ಟಿಯ ಫೋಟೊಗಳನ್ನು ತೆಗೆದುಕೊಡಿ ಎಂದು ಛಾಯಾಗ್ರಾಹಕರೊಬ್ಬರನ್ನು ಕರೆಸಿಕೊಂಡು, ನಂತರ ಅವರ ಬಳಿಯಿದ್ದ ದುಬಾರಿ ಕ್ಯಾಮೆರಾ ಮತ್ತು ವಿಡಿಯೊಗ್ರಫಿ ಉಪಕರಣಗಳನ್ನು ದೋಚಿರುವ ಘಟನೆ ಲಖನೌನ ಇಟೌಂಜಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ವೃತ್ತಿಪರ ಛಾಯಾಗ್ರಾಹಕರಾಗಿರುವ ಅಶೋಕ್ ಯಾದವ್ ಅವರು ಪ್ರಕರಣ ದಾಖಲಿಸಿದ್ದಾರೆ.

ಹುಟ್ಟುಹಬ್ಬ ಪಾರ್ಟಿಯ ಫೋಟೊ ಶೂಟ್‌ಗಾಗಿ ಅಪರಿಚಿತ ವ್ಯಕ್ತಿಯಿಂದ ಜೂನ್‌ 1ರಂದು ಕರೆ ಬಂದಿದೆ. ಛಾಯಾಗ್ರಾಹಕ, ಅವರು ಹೇಳಿದ ಸ್ಥಳಕ್ಕೆ ತೆರಳಿದ ಬಳಿಕ, ಆ ಸ್ಥಳದಲ್ಲಿ ಯಾವುದೇ ಹುಟ್ಟುಹಬ್ಬದ ಪಾರ್ಟಿ ಇಲ್ಲ. ಅದೊಂದು ನಕಲಿ ಕರೆ ಎನ್ನುವುದು ಗೊತ್ತಾಗಿದೆ. ಆದರೆ, ಸ್ಥಳದಲ್ಲಿ ಬೈಕ್‌ನಲ್ಲಿದ್ದ ನಾಲ್ವರು ಅವರ ಬಳಿಯಿದ್ದ ಉಪಕರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

[pj-news-ticker]