Trending

ದೇಶದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಹಣದುಬ್ಬರ ಉಂಟಾಗಲಿದೆ : ಭವಿಷ್ಯ ನುಡಿದ ರಾಹುಲ್ ಗಾಂಧಿ

Spread the love

ನವದೆಹಲಿ: ದೇಶದಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ದೇಶದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಹಣದುಬ್ಬರ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದು, ಮೋದಿ ಸರ್ಕಾರಕ್ಕೆ ಈ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಯಾವುದೇ ನಿರ್ದಿಷ್ಟ ತಂತ್ರವಿಲ್ಲ ಎಂದು ಟೀಕಿಸಿದ್ದಾರೆ.

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, 93.73ರೂ. ತಲುಪಿದೆ. ಇದು ಶೀಘ್ರದಲ್ಲೇ 100ರ ಗಡಿ ದಾಟುವ ಲಕ್ಷಣಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಚುನಾವಣೆಗಳ ನಂತರ ಸಾಮಾನ್ಯ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳೂ ಏರಿಕೆಯಾಗಲಿವೆ ಎಂದು ಭವಿಷ್ಯ ನುಡಿದ ಅವರು ಇದು ಕೇವಲ ಅಂಕಿ-ಅಂಶಗಳಲ್ಲ, ಬದಲಾಗಿ ಪ್ರತಿಯೊಂದು ಕುಟುಂಬದ ಜೇಬಿನ ಮೇಲೆ ನೇರ ಏಟು ಬೀಳಲಿದೆ,” ಎಂದು ಅವರು ‘ಎಕ್ಸ್‌’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ಕುಸಿತದಿಂದ ಸಾಮಾನ್ಯ ಜನರ ಮೇಲೆ ಬೀರುವ ನಾಲ್ಕು ಪ್ರಮುಖ ಪರಿಣಾಮಗಳನ್ನು ರಾಹುಲ್ ವಿವರಿಸಿದ್ದು ಅದರಲ್ಲಿ.

  1. ಉತ್ಪಾದನೆ ಮತ್ತು ಸಾರಿಗೆ ವೆಚ್ಚ ಹೆಚ್ಚಳ:ಕಚ್ಚಾ ತೈಲ ಮತ್ತು ಇಂಧನ ತುಟ್ಟಿಯಾಗುವುದರಿಂದ ವಸ್ತುಗಳ ತಯಾರಿಕೆ ಹಾಗೂ ಸಾಗಾಟದ ವೆಚ್ಚ ದುಬಾರಿಯಾಗಲಿದೆ.
  2. MSME ವಲಯಕ್ಕೆ ಹೊಡೆತ:ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಈ ಬೆಲೆ ಏರಿಕೆಯಿಂದ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಲಿವೆ.
  3. ದೈನಂದಿನ ವಸ್ತುಗಳ ಬೆಲೆ ಏರಿಕೆ:ಸಾಮಾನ್ಯ ಜನರು ಪ್ರತಿದಿನ ಬಳಸುವ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಲಿವೆ.
  4. ಷೇರು ಮಾರುಕಟ್ಟೆಯ ಮೇಲೆ ಒತ್ತಡ:ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಹಣವನ್ನು ಹಿಂತೆಗೆದುಕೊಳ್ಳುವುದರಿಂದ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ (ಇಸ್ರೇಲ್-ಇರಾನ್ ಸಂಘರ್ಷ) ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಏರುತ್ತಿದ್ದರೂ, ಕೇಂದ್ರ ಸರ್ಕಾರ ಮಾತ್ರ ಈ ಪರಿಸ್ಥಿತಿಯನ್ನು ಎದುರಿಸಲು ಯಾವುದೇ ನಿರ್ದಿಷ್ಟ ಕಾರ್ಯತಂತ್ರಗಳನ್ನೂ ರೂಪಿಸಿಲ್ಲ ಬದಲಿಗೆ ಕೇವಲ ಭಾಷಣದಲ್ಲೇ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

[pj-news-ticker]