Trending

ಅಮಾನತ್ತು ರದ್ದು: ಡಯಟ್‌ನಲ್ಲಿ ಹಿರಿಯ ಉಪನ್ಯಾಸಕರಾಗಿ ನಾಗೇಂದ್ರಪ್ಪ ಅಧಿಕಾರ ಸ್ವೀಕಾರ

Spread the love

ಭದ್ರಾವತಿ : ಕಳೆದ ಮಾರ್ಚ್ ತಿಂಗಳಲ್ಲಿ ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಲೋಕಾಯುಕ್ತರಿಂದ ಭ್ರಷ್ಟಾಚಾರದ ಆರೋಪದಡಿ ಅಮಾನತ್ತುಗೊಂಡಿದ್ದ ನಾಗೇಂದ್ರಪ್ಪ ಅವರ ಅಮಾನತ್ತು ಇದೀಗ ರದ್ದುಗೊಂಡಿದೆ.

ಅವರು ಬುಧವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ (ಡಯಟ್) ನಲ್ಲಿ ಬಿಇಒಗೆ ಸಮಾನ ಹುದ್ದೆಯ ಹಿರಿಯ ಉಪನ್ಯಾಸಕರಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಡಯಟ್ ಕಾಲೇಜಿನ ಪ್ರಾಚಾರ್ಯರಾದ ಎಚ್. ಆರ್. ಕೃಷ್ಣಮೂರ್ತಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಎಂ. ಗುರುಮೂರ್ತಿ, ಭದ್ರಾವತಿಯ ನಿವೃತ್ತ ಪ್ರಾಚಾರ್ಯರಾದ ಶಿವಬಸಪ್ಪ, ತರೀಕೆರೆಯ ಎಸ್. ಜೆ. ಎಮ್. ಕಾಲೇಜು ನಿವೃತ್ತ ನೌಕರರಾದ ಕಡದ್ಕಟ್ಟೆ ರಾಜಶೇಖರ್ ಹಾಗೂ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಅತ್ತಿಗುಂದ ಕರಿಯಪ್ಪ ಉಪಸ್ಥಿತರಿದ್ದರು.

[pj-news-ticker]