Trending

ಭದ್ರಾವತಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಂಗಾನಾಯ್ಕಗೊಂದಿ ಅವಿರೋಧ ಆಯ್ಕೆ  

Spread the love

ಭದ್ರಾವತಿ  : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೂಕನಾಯಕ ಪತ್ರಿಕೆಯ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಗಂಗಾನಾಯ್ಕ ಗೊಂದಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯ ಚುನಾವಣಾ ಆಯುಕ್ತರಾದ ಎನ್ .ರವಿಕುಮಾರ್ ಶಿವಮೊಗ್ಗ ಜಿಲ್ಲಾ ಸಂಘದ ಪದಾಧಿಕಾರಿಗಳಾದ ವೈದ್ಯನಾಥ, ಹಾಲಸ್ವಾಮಿ, ದೇಶಾದ್ರಿ ಹೊಸಮನೆ, ರೋಹಿತ್ ರಂಗಸ್ವಾಮಿ ಸೇರಿದಂತೆ ಭದ್ರಾವತಿ ತಾಲೂಕು ಘಟಕದ ಪದಾಧಿಕಾರಿಗಳಾದ ಬದರಿನಾರಾಯಣ ಶ್ರೇಸ್ಟಿ, ಬಸವರಾಜು, ಕೂಡ್ಲಿಗೆರೆ ಮಂಜುನಾಥ್, ಅನಂತಕುಮಾರ್, ಫಿಲೋಮಿನಾ ಹಾಗೂ ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಎನ್. ಬಾಬು, ಶಿವಶಂಕರ್, ಆನಂದ್ ಕುಮಾರ್, ಸುಭಾಷ್ ರಾವ್ ಸಿಂಧಿಯಾ, ರವೀಂದ್ರನಾಥ, ಶೈಲೇಶ್ ಕೋಟಿ, ಅಹಮದ್ ಖಾನ್, ಸುದರ್ಶನ್, ಕಿರಣ್ ಕುಮಾರ್, ಶಂಕರ್ ಸೇರಿದಂತೆ ಬಹುತೇಕ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು

ತಾಲೂಕು ಸಂಘದ ಪದಾಧಿಕಾರಿಗಳ ಆಯ್ಕೆ

ಭದ್ರಾವತಿ ತಾಲೂಕು ಸಂಘದ ಅಧ್ಯಕ್ಷರಾದ ಗಂಗಾನಾಯ್ಕಗೊಂದಿರವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಸುಭಾಷ್ ರಾವ್ ಸಿಂಧಿಯಾ, ಪ್ರಧಾನ ಕಾರ್ಯದರ್ಶಿಯಾಗಿ ಬದರಿನಾರಾಯಣ ಶ್ರೇಷ್ಟಿ, ಕಾರ್ಯದರ್ಶಿಯಾಗಿ ಅನಂತಕುಮಾರ್, ಖಜಾಂಚಿಯಾಗಿ ಫಿಲೋಮಿನಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಣ್ಣಪ್ಪ, ಎನ್. ಬಾಬು, ಶಿವಶಂಕರ್, ಆನಂದಕುಮಾರ್, ಬಸವರಾಜ, ಕಿರಣ್ ಕುಮಾರ್ ಹಾಗೂ ಶಂಕರ್ ರವರನ್ನು ಆಯ್ಕೆ ಮಾಡಲಾಯಿತು.

[pj-news-ticker]