Trending

ಭದ್ರಾವತಿ ಅರಣ್ಯದಲ್ಲಿ ಅಕ್ರಮ ದಂಧೆಗೆ ಪೊಲೀಸ್ ‘ಡ್ರೋನ್’ ಶಾಕ್ : 19 ಮಂದಿ ವಿರುದ್ಧ ಎಫ್‌ಐಆರ್

Spread the love

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಕಾರ್ಯಾಚರಣೆ ನಡೆಸಿದೆ.

ಎಸ್ಪಿ ನಿಖಿಲ್  ಅವರ ಖಡಕ್ ಸೂಚನೆಯ ಮೇರೆಗೆ ಮೊದಲ ಬಾರಿಗೆ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ದಂಧೆಕೋರರ ಹೆಡೆಮುರಿ ಕಟ್ಟಲಾಗಿದ್ದು, 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕೂಗಿ ಕೇಳಿ ಬರುತ್ತಿದ್ದು ಅಲ್ಲಿ ಹೋಗಿ ಸುದ್ದಿ ಮಾಡಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಮಾಧ್ಯಮಗಳಿದ್ದರೆ, ಪೊಲೀಸರ ವಿರುದ್ಧವೇ ಇಂತಹ ದಂಧೆಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ದಾಳಿ ನಡೆಯೊಲ್ಲ ಎಂಬ ಅಸಮಾಧಾನ ಮತ್ತು ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದ್ದವು.

ರಾಗಿಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಲು ಡ್ರೋನ್  ಹಾರಿಸಲಾಗಿತ್ತು. ಈಗ ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಡ್ರೋನ್   ಹಾರಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ 19 ಜನರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೂರಬಿಲ್ಲೆ ಆಟಕ್ಕೆ ಯಾವಾಗ ಬೀಳುತ್ತೆ ಬ್ರೇಕ್?
ಇದೇ ವೇಳೆ ಮಲ್ಲಾಪುರ, ಕಲ್ಲಿಹಾಳ್ ಮತ್ತು ತಟ್ಟೆಹಳ್ಳಿ ಭಾಗಗಳಲ್ಲಿ ಹಗಲು-ರಾತ್ರಿ ನಡೆಯುವ ‘ತೂರಬಿಲ್ಲೆ’ ಜೂಜಾಟದ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ಭಾಗಗಳಲ್ಲಿ ಪೊಲೀಸರು ಯಾವಾಗ ಡ್ರೋನ್ ಹಾರಿಸಿ ಅಕ್ರಮಗಳಿಗೆ ಇತಿಶ್ರೀ ಹಾಡುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

[pj-news-ticker]