Trending

ದೆಹಲಿ ಭೇಟಿ ಫಲಪ್ರದವಾಗಿದೆ, ಶೀಘ್ರ ಶುಭ ಸುದ್ದಿ ಸಿಗಲಿದೆ : ಶಾಸಕ ಗೋಪಾಲಕೃಷ್ಣ ಬೇಳೂರು

Spread the love

ಶಿವಮೊಗ್ಗ: ನಮ್ಮ ದೆಹಲಿ ಭೇಟಿ ಫಲಪ್ರದವಾಗಿದೆ, ಶೀಘ್ರವೇ ಶುಭ ಸುದ್ದಿ ಸಿಗಲಿದೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರು ದೆಹಲಿಗೆ ನಮ್ಮ ಹೈಕಮಾಂಡ್ ಭೇಟಿಗೆ ಹೋಗಿದ್ದೆವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಭೇಟಿ ಮಾಡಿ ಸುಮಾರು‌ ಒಂದೂವರೆ ಗಂಟೆ ಮಾತುಕತೆ ನಡೆಸಿದೆವು. ಖರ್ಗೆ ಅವರು ನಮ್ಮ ಮಾತನ್ನು ಶಾಂತವಾಗಿ ಕೇಳಿದರು. ದೆಹಲಿಗೆ ನಾವು 30 ಜನ ಹೋಗಿದ್ದೆವು. ಇದರಲ್ಲಿ ಎಲ್ಲಾರೂ ಆಕಾಂಕ್ಷಿಗಳಲ್ಲ‌. 20 ಜನರು ಆಕಾಂಕ್ಷಿಗಳಾಗಿದ್ದೆವು ಎಂದರು.

ಡಿ.ಕೆ. ಶಿವಕುಮಾರ್ ಎಲ್ಲೂ ಗರಂ ಆಗಿಲ್ಲ: ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಲ್ಲೂ ನಮ್ಮ ಮೇಲೆ ಗರಂ ಆಗಿಲ್ಲ. ಅವರು ಹೇಳಿಕೆ ಕೊಡುವಾಗ ನೋಡಿ‌ಕೊಡಿ ಎಂದು ಹೇಳಿದ್ದಾರಷ್ಟೆ. ಡಿ.ಕೆ.ಶಿವಕುಮಾರ್ ಅವರನ್ನು ನಿನ್ನೆ ಮಾತನಾಡಿಸಿಕೊಡು ಬಂದಿದ್ದೇವೆ.

ಶಿವಕುಮಾರ್ ಅವರು ನಮ್ಮ ಮೇಲೆ ಯಾವುದೇ ಸಿಟ್ಟಾಗಲ್ಲ. ದೆಹಲಿ ಭೇಟಿಯು ಫಲಪ್ರದವಾಗಲಿದೆ ಎಂಬ ವಿಶ್ವಾಸವಿದೆ. ಮುಂದಿನ ಒಂದೂವರೆ ತಿಂಗಳ ಒಳಗೆ ಮಂತ್ರಿ ಮಂಡಲ ಬದಲಾಗಬಹುದು, ನಮಗೆಲ್ಲಾ ಸಿಹಿ ಸುದ್ದಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ‌ ಮೋದಿ ಮಹಿಳಾ ಮೀಸಲಾತಿ ಮಸೂದೆ ಹಿಡಿದು ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದರು: ನಾರಿಶಕ್ತಿ ಬಿಲ್​ಗೆ ನಮ್ಮ ಬೆಂಬಲವಿದೆ. ಆದರೆ ಇದನ್ನು ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ತರುವುದು ಸರಿಯಲ್ಲ. ಬಿಲ್ ಪಾಸ್ ಆದ್ರೆ, ಅದನ್ನು ಚುನಾವಣಾ ಭಾಷಣದಲ್ಲಿ ಹೇಳಲು ಹೋಗುತ್ತೀರಾ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು. ಮುಂದೆ ಮತ್ತೆ ವಿಶೇಷ ಅಧಿವೇಶನ ಕರೆದು ಬಿಲ್​​ ಕುರಿತು ಚರ್ಚೆ ನಡೆಸಲಿ ಎಂದರು.

[pj-news-ticker]