ಶಿವಮೊಗ್ಗ: ಅವಧಿ ಮೀರಿದ್ದರೂ ಮರಿ ಹಾಕದೆ ಸೋಂಕಿನಿಂದ ಬಳಲುತ್ತಿದ್ದ ನೀರಾನೆ ಮೃತಪಟ್ಟಿದ್ದೆ.
ಈ ನೀರಾನೆಗೆ 12 ವರ್ಷವಾಗಿದ್ದು, ಶಿವಮೊಗ್ಗ ಮೃಗಾಲಯದಲ್ಲಿತ್ತು.
ಈಚೆಗೆ ಚಿಕಿತ್ಸೆ ನೀಡಲು ಹೋಗಿದ್ದ ಡಾ.ಸಮೀಕ್ಷಾ ರೆಡ್ಡಿ ಸಾವಿಗೂ ಈ ನೀರಾನೆ ಕಾರಣವಾಗಿತ್ತು. ಗರ್ಭಿಣಿಯಾಗಿದ್ದ ನೀರಾನೆಗೆ ಚಿಕಿತ್ಸೆ ನೀಡಲೆಂದು ಆಕೆ ಅಲ್ಲಿಗೆ ತೆರಳಿದ್ದರು. ಕಳೆದ ಮಾರ್ಚ್ 20 ರಂದು ಡಾ.ಸಮೀಕ್ಷಾ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಡಾ ಸಮೀಕ್ಷಾ ಮೃತಪಟ್ಟಿದ್ದರು.
ಬಳಿಕ ಇತ್ತೀಚಿಗೆ ಅವಧಿ ಮೀರಿದ್ದರೂ ಮರಿ ಹಾಕಿರಲಿಲ್ಲ. ಈಚೆಗೆ ಬನ್ನೇರುಘಟ್ಟ, ಮೈಸೂರು ಮೃಗಾಲಯದ ವೈದ್ಯರು ಪರೀಕ್ಷೆ ನಡೆಸಿದ್ದು, ಮರಿ ಹೊಟ್ಟೆಯೊಳಗೆ ಸಾವಿಗೀಡಾಗಿದ್ದು ಸೋಂಕಿನಿಂದ ಬಳಲುತ್ತಿದ್ದೆ ಎಂದು ವರದಿ ನೀಡಲಾಗಿತ್ತು. ಬಳಿಕ ಗರ್ಭ ಸ್ವಚ್ಛಕ್ಕೆ ನೀರಾನೆಗೆ ವೈದ್ಯರು ಔಷಧಿ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀರಾನೆ ಸತ್ತಿದೆ ಎಂದು ವರದಿ ತಿಳಿಸಿದೆ.
ಸಮೀಕ್ಷಾ ಮೇಲೆ ದಾಳಿ ಮಾಡುವ 3 ದಿನ ಮೊದಲೇ ಆಹಾರ ತ್ಯಜಿಸಿದ್ದ ನೀರಾನೆ, ಕಳೆದ 20 ದಿನದಿಂದಲೂ ಆಹಾರ ತಿಂದಿರಲಿಲ್ಲ.
