Trending

ಕುವೆಂಪು ವಿವಿಯಲ್ಲಿ ಬಲಪಂಥೀಯ ವಿಚಾರ ಸಂಕಿರಣ ಆರೋಪ : ಡಿಎಸ್‌ಎಸ್ ಪ್ರತಿಭಟನೆ

Spread the love

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಕುರಿತು ವಿಚಾರ ಸಂಕಿರಣ ಆಯೋಜನೆ ವಿರೋಧಿಸಿ ದಲಿತ ಸಂಘರ್ಷ ಸಮಿತಿ ತಮಟೆ ಚಳವಳಿ ನಡೆಸಿದ ಘಟನೆ ಮಂಗಳವಾರ  ನಡೆದಿದೆ.

ವಿಚಾರ ಸಂಕಿರಣ ಬಲ ಪಂಥೀಯ ಅಜೆಂಡಾದಂತೆ ನಡೆಯುತ್ತಿದೆ. ವಿಚಾರ ಸಂಕಿರಣ ಕುವೆಂಪು, ಅಂಬೇಡ್ಕರ್ ಆಶಯಕ್ಕೆ ವಿರುದ್ಧವಿದೆ. ಕುವೆಂಪು ವಿವಿಯಲ್ಲಿ ಸಂಘ ಪರಿವಾರದ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ವಿಚಾರ ಸಂಕಿರಣ ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಡಿಎಸ್ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯದ ಗೇಟ್‌ ಬಳಿಯೇ ಪೊಲೀಸರು ತಡೆದರು. ಪೊಲೀಸರ ಬಂದೋಬಸ್ತ್‌ ನಡುವೆ ಕಾರ್ಯಕ್ರಮ ನೆರವೇರಿದೆ. ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಕರೆದೊಯ್ದರು.

ಸ್ವರ್ಣ ರಶ್ಮಿ ಟ್ರಸ್ಟ್, ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಮತ್ತು ಕುವೆಂಪು ವಿವಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಭಾಗಿಯಾಗಿದ್ದರು.

[pj-news-ticker]