Trending

ನಿರ್ಮಲಾ ಸೀತಾರಾಮನ್ ಗೆ ಶಾಕ್ ಕೊಟ್ಟ ಪತಿ, ತಮಿಳುನಾಡಿನಲ್ಲಿ BJP ವಿರೋಧಿ ಅಭಿಯಾನದಲ್ಲಿ ಭಾಗಿ

Spread the love

ಚೆನ್ನೈ: 2026ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು ಐತಿಹಾಸಿಕ ಚತುಷ್ಕೋನ ಸ್ಪರ್ಧೆಗೆ ಸಜ್ಜಾಗಿರುವಂತೆಯೇ ಇತ್ತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ BJP ವಿರೋಧಿ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಶಾಕ್ ನೀಡಿದ್ದಾರೆ.

ಹೌದು.. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು ಬಿಜೆಪಿ ವಿರೋಧಿ ಚಳುವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

“ಶೂನ್ಯ ಬಿಜೆಪಿ ಚಳುವಳಿ” ಎಂದು ಕರೆಯಲ್ಪಡುವ ಚಳುವಳಿ ತಮಿಳುನಾಡು ರಾಜ್ಯಾದ್ಯಂತ ಹೊಸ ರಾಜಕೀಯ ಅಲೆಯನ್ನು ಸೃಷ್ಟಿಸಿದೆ.

ಬಿಜೆಪಿಗೆ ಒಂದೇ ಒಂದು ಸ್ಥಾನ ಕೂಡ ಸಿಗಬಾರದು

ಹಾಲಿ ಚುನಾವಣೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನವನ್ನು ಪಡೆಯದಂತೆ ನೋಡಿಕೊಳ್ಳುವುದು ಈ ಚಳುವಳಿಯ ಏಕೈಕ ಉದ್ದೇಶವಾಗಿದೆ. ಇದೇ ಅಭಿಯಾನದಲ್ಲಿ ಪರಿಕಾಲ ಪ್ರಭಾಕರ್ ಅವರು ಬಿಜೆಪಿ ವಿರುದ್ಧದ ಅಭಿಯಾನವನ್ನು ತೀವ್ರವಾಗಿ ಮುನ್ನಡೆಸುತ್ತಿದ್ದಾರೆ.

ದ್ರಾವಿಡ ಸಿದ್ಧಾಂತಗಳು ಮತ್ತು ತಮಿಳು ರಾಷ್ಟ್ರೀಯತೆ ಈಗಾಗಲೇ ಆಳವಾಗಿ ಬೇರೂರಿರುವ ತಮಿಳುನಾಡಿನಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯುವ ಗುರಿಯನ್ನು ಹೊಂದಿರುವ ಸೈದ್ಧಾಂತಿಕ ಯುದ್ಧವಾಗಿ ಈ ಉಪಕ್ರಮವನ್ನು ವ್ಯಾಪಕವಾಗಿ ನೋಡಲಾಗುತ್ತಿದೆ.

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶವಿರುವ ಕ್ಷೇತ್ರಗಳಲ್ಲಿ ಮತಗಳನ್ನು ವಿಭಜಿಸುವ ಮೂಲಕ ಅಥವಾ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸುವ ಮೂಲಕ ಬಿಜೆಪಿ ಸೋಲುವಂತೆ ಮಾಡುವುದು ಈ ಚಳವಳಿಯ ಮುಖ್ಯ ಗುರಿಯಾಗಿದೆ. ಆ ಮೂಲಕ ತಳಮಟ್ಟದ ಶಕ್ತಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

[pj-news-ticker]