Trending

ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ… ವಿಡಿಯೋ

Spread the love

ಹೈದರಾಬಾದ್: ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆಂದು ಹೋಟೆಲ್ ಗೆ ಬಂದಿದ್ದ ಯುವಕನೊಬ್ಬ ಹೋಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಜೀವ ಕಳೆದುಕೊಂಡಿರುವ ಘಟನೆ ಸೋಮವಾರ(ಅ.21) ಹೈದರಾಬಾದ್ ನಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಉದಯ್ ಕುಮಾರ್ (22) ಎಂದು ಗುರುತಿಸಲಾಗಿದೆ.

ಉದಯ್ ಕುಮಾರ್ ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆಂದು ನಗರದ ವಿವಿ ಪ್ರೈಡ್ ಹೋಟೆಲ್ ಗೆ ಸೋಮವಾರ ರಾತ್ರಿ ಬಂದಿದ್ದ ಈ ವೇಳೆ ಹೋಟೆಲ್ ನ ಮೂರನೇ ಮಹಡಿಯ ಕೊಠಡಿಯಲ್ಲಿ ಗೆಳೆಯರು ಪಾರ್ಟಿ ನಡೆಸುತ್ತಿದ್ದರು ಈ ವೇಳೆ ಉದಯ್ ಕೊಠಡಿಯಿಂದ ಹೊರಗೆ ಬಂದಿದ್ದಾನೆ ಈ ವೇಳೆ ಅಲ್ಲೊಂದು ನಾಯಿ ಕಂಡಿದ್ದಾನೆ ಇದನ್ನು ಕಂಡ ಉದಯ್ ನಾಯಿಯನ್ನು ಓಡಿಸಲು ಮುಂದಾಗಿದ್ದಾನೆ, ನಾಯಿ ಓಡಿದನ್ನು ಕಂಡು ಅದರ ಹಿಂದಿನಿಂದ ಉದಯ್ ಓಡಿ ಬಂದಿದ್ದಾನೆ, ಓಡುವ ಭರದಲ್ಲಿ ಆಯತಪ್ಪಿ ತೆರೆದ ಕಿಟಕಿಯ ಮೂಲಕ ಉದಯ್ ಹೋಟೆಲ್ ಕಟ್ಟಡದಿಂದ ಹೊರಗೆ ಬಿದ್ದಿದ್ದಾನೆ.

ಉದಯ್ ಕಟ್ಟಡದಿಂದ ಹೊರಗೆ ಬೀಳುವುದನ್ನು ಅಲ್ಲಿದ್ದ ಇತರ ಗೆಳೆಯರು ನೋಡಿದ್ದಾರೆ ಕೂಡಲೇ ಕಟ್ಟಡದ ಕೆಳಗೆ ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಮೊದಲಿಗೆ ಆತನ ಗೆಳೆಯರಿಗೆ ಉದಯ್ ಕಟ್ಟಡದಿಂದ ಹೇಗೆ ಬಿದ್ದಿದ್ದು ಎಂದು ಗೊತ್ತಾಗಿರಲಿಲ್ಲ ಬಳಿಕ ಹೊಟೇಲ್ ಸಿಸಿ ಟಿವಿ ದೃಶ್ಯಾವಳಿ ಗಮನಿಸಿದಾಗ ನಾಯಿಯನ್ನು ಓಡಿಸಲು ಹೋಗಿ ಆಯತಪ್ಪಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

[pj-news-ticker]