Trending

ಅನವೇರಿಯಲ್ಲಿ ಭಾರಿ ಗಾಳಿ – ಆಲಿಕಲ್ಲು ಮಳೆ : ರಸ್ತೆಗಳಲ್ಲಿ ಹಿಮದ ಹೊದಿಕೆಯ ದೃಶ್ಯ

Spread the love

ಹೊಳೆಹೊನ್ನೂರು : ಸಮೀಪದ ಅನವೇರಿ ಭಾಗದಲ್ಲಿ ಸೋಮವಾರ ಸಂಜೆ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿದ ಪರಿಣಾಮ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡ ಘಟನೆ ವರದಿಯಾಗಿದೆ.

ಸಂಜೆ ವೇಳೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಮೋಡಗಳು ಆವರಿಸಿಕೊಂಡು, ಹೊಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೋರಾಗಿ ಮಳೆ ಆರಂಭವಾಯಿತು. ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದು, ಆಲಿಕಲ್ಲುಗಳು ಧರೆಗೆ ಅಪ್ಪಳಿಸಿದವು.

ಭೀಕರ ಬಿರುಗಾಳಿಯ ಅಬ್ಬರಕ್ಕೆ ಅನೇಕ ಮರಗಳು ರಸ್ತೆಗಳಿಗೆ ಉರುಳಿ ಬಿದ್ದ ಪರಿಣಾಮ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು. ಬಳಿಕ ಸ್ಥಳೀಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲು ಕ್ರಮ ಕೈಗೊಂಡರು.

ಇದೇ ವೇಳೆ, ಗಾಳಿಯ ತೀವ್ರತೆಗೆ ಅನೇಕ ಅಡಿಕೆ ಮರಗಳು ನೆಲಕ್ಕುರುಳಿದ್ದು, ರೈತರಿಗೆ ನಷ್ಟ ಉಂಟಾಗಿರುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಕೆಲವೇ ಗಂಟೆಗಳಲ್ಲಿ ರಸ್ತೆಯ ಮೇಲೆ ಸುಮಾರು ಒಂದು ಅಡಿ ಎತ್ತರದ ಆಲಿಕಲ್ಲುಗಳ ಹೊದಿಕೆ ನಿರ್ಮಾಣವಾಗಿದ್ದು, ಜನರು ಆಶ್ಚರ್ಯಚಕಿತರಾದರು.

[pj-news-ticker]