Trending

ಈಶ್ವರಪ್ಪನವರ ಸ್ಪರ್ಧೆ ನಾಮಕವಸ್ಥೆ ಅಷ್ಟೇ: ಆರಗ ಜ್ಞಾನೇಂದ್ರ

Spread the love

ತೀರ್ಥಹಳ್ಳಿ: ಜಿಲ್ಲೆಯಲ್ಲಿ ಜನರ ಪ್ರೀತಿ ವಿಶ್ವಾಸ ತೆಗೆದುಕೊಂಡಿರುವ ಬಿ.ವೈ. ರಾಘವೇಂದ್ರ ಈ ಬಾರಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಬಂಟರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಅಭಿವೃದ್ಧಿಗೆ ಮತ ಹಾಕುವ ಪ್ರತಿಯೊಬ್ಬರೂ ಅವರಿಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಈಶ್ವರಪ್ಪ ಅವರ ಸ್ಪರ್ಧೆ ನಾಮಕವಸ್ಥೆ ಅಷ್ಟೇ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂಬ ನಂಬಿಕೆ ಇದೆ. ಕಾಂತೇಶ್ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದುತ್ವದ ನಾಯಕರನ್ನು ನಾವು ಕಡೆಗಣಿಸಿಲ್ಲ ಎಂದರು.

ಈ ಸಂದರ್ಭದಲ್ಲಿ ನವೀನ್ ಹೆದ್ದೂರು, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು.

[pj-news-ticker]