ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿ ಎಂಬವರು ತನ್ನ ವಾಸದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾರೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ.ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷ ಗಜಾನನ ವಾಮನ ಸುತರ, ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು.
ಸ್ಥಳಕ್ಕೆ ಹೋಗಿ ದಾಳಿ ನಡೆಸಿದ ತಂಡ ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು 2.50 ಲಕ್ಷ ಮೌಲ್ಯದ 9 ಕೆಜಿ 524 ಗ್ರಾಂ ತೂಕದ ಒಟ್ಟು 14 ಹಸಿ ಗಾಂಜಾ ಗಿಡಗಳನ್ನು ಅಮಾನತು ಪಡಿಸಿಕೊಂಡು ಆರೋಪಿ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.