Breaking
Sat. Apr 20th, 2024

ಜೈ ಶ್ರೀರಾಮ್‌ ಘೋಷಣೆ ಕೂಗಿ ಮುಸ್ಲಿಂ ಕುಟುಂಬದ ಮೇಲೆ ಬಲವಂತವಾಗಿ ಹೋಳಿ ಬಣ್ಣ ಎಸೆದ ಯುವಕರು

By Mooka Nayaka News Mar 24, 2024
Spread the love

ಲಕ್ನೋ: ಮುಸ್ಲಿಂ ಕುಟುಂಬವೊಂದನ್ನು ಅಡ್ಡಗಟ್ಟಿ ಅವರ ಮೇಲೆ ಬಲವಂತವಾಗಿ ಹೋಳಿ ಬಣ್ಣವನ್ನು ಹಾಕಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಾರ್ಚ್‌ 20 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.ಬೈಕ್‌ ನಲ್ಲಿ ಸಾಗುತ್ತಿದ್ದ ಮುಸ್ಲಿಂ ಕುಟುಂಬವನ್ನು ಕೆಲ ಅಪರಿಚಿತರು ಅಡ್ಡಗಟ್ಟಿದ್ದಾರೆ. ಆ ಬಳಿಕ ಅವರ ಮೇಲೆ ಬಲವಂತವಾಗಿ ಬಣ್ಣದ ನೀರನ್ನು ಎಸೆದಿದ್ದಾರೆ. ಜೈಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಾ ಕುಟುಂಬದ ಮೇಲೆ ಬಣ್ಣವನ್ನು ಎಸೆಯಲಾಗಿದೆ.ನೊಂದ ಕುಟುಂಬವನ್ನು ಸಂಪರ್ಕಿಸಿ ಅವರಿಂದ ಹೇಳಿಕೆ ಪಡೆದು ಎಫ್‌ ಐಆರ್‌ ದಾಖಲಿಸುವಂತೆ ಸೂಚಿಸಲಾಗಿದೆ. ಬಿಜ್ನೋರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಈ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ  ನೀರಜ್ ಜಾದುವಾನ್ ಹೇಳಿದ್ದಾರೆ.

Related Post