Breaking
Sat. Apr 20th, 2024

ಭದ್ರಾವತಿ; ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂಗೆ ನುಡಿ ನಮನ

By Mooka Nayaka News Mar 24, 2024
Spread the love

ಭದ್ರಾವತಿ; ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ರವರ ಆಶಯಗಳನ್ನು ತಮ್ಮ ಸೇವಾ ಅವಧಿಯಲ್ಲಿ ಬದ್ಧತೆಯಿಂದ ಈಡೇರಿಸುವುದರಲ್ಲಿ ಕೆ. ಶಿವರಾಂ ಒಬ್ಬರಾಗಿ ಕಾಣ ಸಿಗುತ್ತಾರೆಂದು ಪ್ರೊ. ಶಿವರಾಂ ಎನ್ .ಆರ್ ತಿಳಿಸಿದರು.

ಕರ್ನಾಟಕ ದಲಿತ ನೌಕರರ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶುಗರ್ ಟೌನ್ ಲಯನ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ನಟ ಹಾಗೂ ನಿವೃತ್ತ ಅಧಿಕಾರಿ ಕೆ.ಶಿವರಾಂ ಇವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಶೋಷಣೆಗಳನ್ನು ಅನುಭವಿಸಿದ ಕೆ. ಶಿವರಾಂ ರವರು ಕನ್ನಡದಲ್ಲಿ ಐಎಎಸ್ ಪಾಸು ಮಾಡಿ ಅಧಿಕಾರಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟ ಹಾಗೂ ಶೋಷಣೆಯನ್ನು ಪರಿಶಿಷ್ಟರು ಹಾಗೂ ಇತರೆ ಸಮಾಜದವರು ಅನುಭವಿಸಬಾರ ದೆಂದು ತಮ್ಮ ಸೇವಾ ಅವಧಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ಉಳಿದಿದ್ದಾರೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರು ಹಾಗೂ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಶಿವ ಬಸವಪ್ಪ ರವರು ಕೆ. ಶಿವರಾಂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರದಂತಹ ಸಂದರ್ಭದಲ್ಲಿ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗ ಗಳಿಗೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದರು. ಈ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲು ಸ್ಕಾಲರ್ ಶಿಪ್, ಗಗನಸಖಿ ತರಬೇತಿಗಳು, ದೇವಸ್ಥಾನಗಳಲ್ಲಿ ಅರ್ಚಕರ ತರಬೇತಿ ಹೀಗೆ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರೆಂದರು.

ಕಾರ್ಯಕ್ರಮದಲ್ಲಿ ತಾಲೂಕು ಚಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ ಎಸ್, ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ತಾಲ್ಲೂಕು ಅಧ್ಯಕ್ಷ ಹಾಗೂ ವಕೀಲರಾದ ಶಿವಕುಮಾರ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀನಿವಾಸ್, ತಮ್ಮಯ್ಯ, ಪ್ರೇಮ್ ಕುಮಾರ್,ಲಿಂಗರಾಜ, ನಾಗರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕೆ. ಶಿವರಾಮ ಅಭಿನಯದ ಚಲನಚಿತ್ರ ಗೀತೆಗಳ ಗಾನ ನಮನ ಕಾರ್ಯಕ್ರಮವನ್ನು ಚಿಗುರು ಕಲಾತಂಡ ಭದ್ರಾವತಿ ಇವರು ನಡೆಸಿಕೊಟ್ಟರು, ಸರ್ವರನ್ನು ಮಹದೇವ್ ಸ್ವಾಗತಿಸಿದರು.

Related Post