Trending

ತೀರ್ಥಹಳ್ಳಿ : ರಭಸದಲ್ಲಿ ತಡೆಗೋಡೆಗೆ ಆಟೋ ಡಿಕ್ಕಿ : ರುಂಡ ಬೇರ್ಪಟ್ಟು ಮಹಿಳೆ ಸಾವು – ಪತಿ ಮಗನಿಗೆ ಗಂಭೀರ ಗಾಯ

Spread the love

ತೀರ್ಥಹಳ್ಳಿ: ತಡೆಗೋಡೆಗೆ ರಭಸವಾಗಿ ಆಟೋ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆಯ ರುಂಡ – ಮುಂಡ ಬೇರ್ಪಟ್ಟ ಹೃದಯವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕು ನಾಲೂರು ಗ್ರಾಮದ ಬಳಿ ನಡೆದಿದೆ.

ಮೃತರನ್ನು ನಿಶ್ಮಿತಾ ಶೆಟ್ಟಿ (27) ಎಂದು ಗುರುತಿಸಲಾಗಿದೆ. ಮೃತ ನಿಶ್ಮಿತಾ ಪತಿ ಸುದರ್ಶನ್ ಶೆಟ್ಟಿ (35) ಹಾಗೂ ಮಗ ಸಂಚಿತ್ (7) ಗಾಯಗೊಂಡಿದ್ದು, ತೀರ್ಥಹಳ್ಳಿ ತಾಲೂಕು ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಚಾಲಕ ಕುರುವಳ್ಳಿ ಯಲ್ಲಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಟೋ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಂತೆಯೇ ಚಾಲಕನ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹ ಪ್ರವೇಶ ಕಾರ್ಯಕ್ರಮದಿಂದ ವಾಪಸ್ ಬರುವಾಗ ಅಪಫಾತ: ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪದ ಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹ ಪ್ರವೇಶಕ್ಕಾಗಿ ಆಟೋದಲ್ಲಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬರುವಾಗ ನಾಲೂರು ಸಮೀಪದ ತಿರುವಿನಲ್ಲಿ ಕಬ್ಬಿಣದ ಡಿವೈಡರ್ (ತಡೆಗೋಡೆ) ಗೆ ಆಟೋ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಬಲ ಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ ಅವರ ರುಂಡ ಕಟ್ ಆಗಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೇರ್ಪಟ್ಟ ರುಂಡ – ಮುಂಡ: ವೇಗದಲ್ಲಿ ಡಿವೈಡರ್​ಗೆ ಆಟೋ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ. ರುಂಡ ಕಟ್ ಆಗಿ ಮುಂಡದಿಂದ ದೂರ ಹೋಗಿ ಬಿದ್ದಿರುವ ದೃಶ್ಯ ಹೃದಯವಿದ್ರಾವಕವಾಗಿತ್ತು.

[pj-news-ticker]