ತೀರ್ಥಹಳ್ಳಿ: ಪಟ್ಟಣದ ಯಡೇಹಳ್ಳಿ ಕೆರೆ ಸಮೀಪದ ಸಹ್ಯಾದ್ರಿ ಕಾಲೇಜು ಬಳಿ ತೀರ್ಥಹಳ್ಳಿಯಿಂದ ಸಾಗರ ಕಡೆ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ.
ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ಸಮೇತ ಕಂಬ ರಸ್ತೆ ಮೇಲೆ ಬಿದ್ದಿದ್ದು, ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೆಸ್ಕಾಂ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ತಕ್ಷಣ ವಿದ್ಯುತ್ ತಂತಿ ಕಟ್ ಮಾಡಿ ಓಡಾಡುವ ಸವಾರರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.ಇನ್ನು ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ಪಾರಾಗಿದ್ದಾರೆ.ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.