Trending

ಶಿವಮೊಗ್ಗ: ರೈತನಿಗೆ ಪರಿಹಾರ ನೀಡಲು ವಿಳಂಬ : ಡಿಸಿ ಕಾರು ಸೀಜ್‌ ಮಾಡಲು ಕೋರ್ಟ್‌ ಆದೇಶ

Spread the love

ಶಿವಮೊಗ್ಗ: ಭೂ ಸ್ವಾಧೀನ ಪ್ರಕರಣದಲ್ಲಿ ಪರಿಹಾರ ನೀಡಿಕೆ ವಿಳಂಬ ಮಾಡಿದ ಕಾರಣಕ್ಕೆ ನ್ಯಾಯಾಲಯವು ಜಿಲ್ಲಾಧಿಕಾರಿಯವರ ಕಾರು ಹಾಗೂ ಕಚೇರಿ ವಸ್ತುಗಳನ್ನು ವಶಕ್ಕೆ ಪಡೆಯಲು ಮುಂದಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೋರ್ಟ್‌ ಆದೇಶದಂತೆ ವಸ್ತುಗಳ ಸೀಜ್‌ ಮಾಡಲು ಕೋರ್ಟ್ ಆಮೀನ್ ಡಿಸಿ ಕಚೇರಿಗೆ ಆಗಮಿಸಿದ ಪ್ರಸಂಗವೂ ನಡೆಯಿತು.

1995 ರಲ್ಲಿ ವಸತಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಆಗ ಹರಮಘಟ್ಟದ ರೈತ ನಂದ್ಯಪ್ಪ ಎಂಬ ರೈತ ಒಂದು ಎಕರೆ ಕಳೆದುಕೊಂಡಿದ್ದರು. ಇದಕ್ಕೆ ಭೂ ಸ್ವಾಧೀನಾಧಿಕಾರಿಯೂ ಆಗಿದ್ದ ಅಂದಿನ ಡಿಸಿ 22 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿದ್ದರು. ಈ ಪೈಕಿ 9 ಲಕ್ಷ ರೂಪಾಯಿ ಮಾತ್ರ ಪರಿಹಾರ ನೀಡಲಾಗಿತ್ತು.

ರೈತ ನಂದ್ಯಪ್ಪ ಪರಿಹಾರ ವಿಳಂಬ ವಿರುದ್ಧ ಕೋರ್ಟ್ ಹೋಗಿದ್ದರು. ಬಾಕಿ ಹಣದ ಜೊತೆಗೆ ಬಡ್ಡಿ ಸೇರಿಸಿ 95 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಇದೀಗ ಆದೇಶ ನೀಡಿದೆ. ಶಿವಮೊಗ್ಗ ಎರಡನೇ ಹೆಚ್ಚುವರಿ ಕೋರ್ಟ್ ಡಿಸಿ ಕಾರು ಮತ್ತು ಕಚೇರಿ ವಸ್ತುಗಳ ಸೀಜ್‌ ಮಾಡಲು ಆದೇಶ ನೀಡಿದೆ.

ಕೋರ್ಟ್ ನ ಅಮೀನ ಜೊತೆ ರೈತ ನಂದ್ಯಪ್ಪ ಡಿಸಿ ಕಚೇರಿಗೆ ಆಗಮಿಸಿದರು.  ಡಿಸಿ ಜೊತೆ ಚರ್ಚೆ ನಡೆಸಿದರು. ನಿಮಗೆ ಬೇಕಾದರೆ ವಾಹನ ಸೀಜ್ ಮಾಡಿಕೊಳ್ಳಿ ಎಂದ ಡಿಸಿ ಮತ್ತು ಸಿಇಒ ಹೇಳಿದರು. ಬೇರೆ ದಾರಿ ಇಲ್ಲದೆ ಡಿಸಿ ಕೊಠಡಿಯಿಂದ ಹೊರ ಬಂದ ನಂದ್ಯಪ್ಪ, ಮುಂದಿನ ಕ್ರಮಕ್ಕೆ ಕೋರ್ಟ್ ಮೊರೆ ಹೋಗುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.

[pj-news-ticker]